ADVERTISEMENT

ಉಪ್ಪಿನಂಗಡಿ: ರಬ್ಬರ್ ಬೋಟ್ ಹಸ್ತಾಂತರ

ಗೃಹ ರಕ್ಷಕ ದಳ ಘಟಕಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 12:28 IST
Last Updated 10 ಜುಲೈ 2018, 12:28 IST
ಉಪ್ಪಿನಂಗಡಿ ಗೃಹ ರಕ್ಷಕ ದಳ ಘಟಕಕ್ಕೆ ಗೃಹ ರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ್ ಹಸ್ತಾಂತರಿಸಿ ಬೋಟ್ ಹಸ್ತಾಂತರಿಸಿದರು. ರಘುನಾಥ ರೈ, ಡಾ. ರಾಜಾರಾಂ, ದಿನೇಶ್  ಇದ್ದರು. (ಉಪ್ಪಿನಂಗಡಿ ಚಿತ್ರ)
ಉಪ್ಪಿನಂಗಡಿ ಗೃಹ ರಕ್ಷಕ ದಳ ಘಟಕಕ್ಕೆ ಗೃಹ ರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ್ ಹಸ್ತಾಂತರಿಸಿ ಬೋಟ್ ಹಸ್ತಾಂತರಿಸಿದರು. ರಘುನಾಥ ರೈ, ಡಾ. ರಾಜಾರಾಂ, ದಿನೇಶ್  ಇದ್ದರು. (ಉಪ್ಪಿನಂಗಡಿ ಚಿತ್ರ)   

ಉಪ್ಪಿನಂಗಡಿ: ‘ಗೃಹ ರಕ್ಷಕ ದಳ ಉಪ್ಪಿನಂಗಡಿ ಘಟಕದ ವಿಪತ್ತು ನಿರ್ವಹಣಾ ತಂಡದ ಕಾರ್ಯನಿರ್ವಹಣೆ ಸುಲಭವಾಗುವಂತೆ ರಬ್ಬರ್ ಬೋಟ್ ಹಸ್ತಾಂತರ ಕಾರ್ಯಕ್ರಮ ಭಾನುವಾರ ನಡೆಯಿತು.

ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ್ ಬೋಟ್‌ ಮತ್ತು ಇತರ ಸಲಕರಣೆಗಳನ್ನು ಹಸ್ತಾಂತರಿಸಿ ಮಾತನಾಡಿ ‘ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‍ ಅವರು ಜಿಲ್ಲೆಯ ವಿಪತ್ತು ನಿರ್ವಹಣಾ ಕಾರ್ಯಕ್ಕೆ ಅಗತ್ಯವಾದ ರಬ್ಬರ್ ಬೋಟ್, ರೈನ್ ಕೋಟ್, ಟಾರ್ಚ್ ಗಳನ್ನು ಬೇಡಿಕೆಯಂತೆ ಒದಗಿಸಿದ್ದು, ಅವರ ಸ್ಪಂದನದಿಂದಾಗಿ ಉಪ್ಪಿನಂಗಡಿ ಘಟಕಕ್ಕೂ ಒಂದು ಬೋಟ್, ಐದು ರೈನ್ ಕೋಟ್, ಒಂದು ಟಾರ್ಚ್ ಲಭಿಸಿದೆ’ ಎಂದರು.

ಈ ಬೋಟ್ 130 ಕೆ.ಜಿ. ತೂಕವಿದ್ದು, ಗರಿಷ್ಠ ಹತ್ತು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸ್ವಯಂ ಚಾಲಿತ ಯಂತ್ರ ಅಳವಡಿಸಲ್ಪಟ್ಟ ಈ ಬೋಟು ₹3.25 ಲಕ್ಷ ಬೆಲೆ ಇದೆ, ನೀರಿನ ವೇಗ ಎದುರಿಸುವ ಸಾಮರ್ಥ್ಯವನ್ನು ಅಧ್ಯಯನ ಮಾಡಿಕೊಂಡು ಎಚ್ಚರಿಕೆಯಿಂದ ಉಪಯೋಗಿಸಬೇಕು ಎಂದರು.

ADVERTISEMENT

ಬೋಟ್ ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಸಹಸ್ರಲಿಂಗೆಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಲಿಮಾರ ರಘುನಾಥ ರೈ, ಸದಸ್ಯರಾದ ಬೆಳ್ಳಿಪ್ಪಾಡಿ ಪ್ರಕಾಶ್ ರೈ, ಡಾ. ರಾಜಾರಾಮ, ಗೃಹ ರಕ್ಷಕ ದಳದ ಉಪ್ಪಿನಂಗಡಿ ಘಟಕಾಧಿಕಾರಿ ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.