ಎಫ್‌ಐಆರ್
ಮಂಗಳೂರು: ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಮತಿ ಪಡೆಯದೆಯೇ ಡಿ.ಜೆ ಬಳಸಿವರ ವಿರುದ್ಧ ಉರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಅಶೋಕನಗರದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಡಿ.ಜೆ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಗುರುವಾರ ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರು ಬಂದಿತ್ತು. ಅದರನ್ವಯ ಉರ್ವ ಠಾಣೆಯ ಹೊಯ್ಸಳ ವಾಹನದ ಸಿಬ್ಬಂದಿ ರಾತ್ರಿ 10.52ಕ್ಕೆ ಸ್ಥಳಕ್ಕೆ ತಲುಪಿದಾಗ ಅಪಾರ್ಟ್‌ಮೆಂಟ್ ಸಮುಚ್ಚಯದ ಐದನೇ ಮಹಡಿಯಲ್ಲಿ ಧ್ವನಿವರ್ಧಕ ಬಳಸಲಾಗುತ್ತಿತ್ತು. ಅಪಾರ್ಟ್‌ಮೆಂಟ್ ಸಮುಚ್ಚಯದ ಮಾಲೀಕ ದಿಲೀಪ್ ಹಾಗೂ ಕಾರ್ಯಕ್ರಮ ನಿರ್ವಹಿಸುವ ಕಂಪನಿ (ಅಭಿಜ್ಞಾ) ಡಿ.ಜೆ ಬಳಕೆಗೆ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ. ಅನಗತ್ಯ ಶಬ್ದ ಮಾಲಿನ್ಯ ಮಾಡಿ, ಸುತ್ತ-ಮುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟುಮಾಡಿದ ಕುರಿತು ಹೊಯ್ಸಳ ಸಿಬ್ಬಂದಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.