ADVERTISEMENT

ಉಳ್ಳಾಲ: | ದೇರಳಕಟ್ಟೆ: ಸಂತಸ್ತ್ರರ ಮನೆಗೆ ಯು.ಟಿ.ಖಾದರ್ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:51 IST
Last Updated 11 ಜೂನ್ 2025, 14:51 IST
ದೇರಳಕಟ್ಟೆ : ದುರಂತ ನಡೆದ ಮನೆಗೆ ಯು.ಟಿ.ಖಾದರ್ ಭೇಟಿ
ದೇರಳಕಟ್ಟೆ : ದುರಂತ ನಡೆದ ಮನೆಗೆ ಯು.ಟಿ.ಖಾದರ್ ಭೇಟಿ   

ಉಳ್ಳಾಲ:‌ ಮನೆ ಮೇಲೆ ಗುಡ್ಡದ ಮಣ್ಣು ಕುಸಿದು ಬಾಲಕಿಯೊಬ್ಬಳು ಮೃತಪಟ್ಟ ದೇರಳಕಟ್ಟೆ ಬೆಳ್ಮ ಗ್ರಾಮದ ಕಾನಕೆರೆಗೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು, ಕಾನಕೆರೆಯ ಈ ಪ್ರದೇಶದಲ್ಲಿ ತುಂಬಾ ಗಂಭೀರ ಪರಿಸ್ಥಿತಿ ಇದೆ. ಮಳೆಗಾಲ‌ ಮುಗಿಯುವ ತನಕ ತಾತ್ಕಾಲಿಕವಾಗಿ ಇನ್ನಷ್ಟು ಗುಡ್ಡ ಕುಸಿಯಂತೆ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇನೆ. ಗುಡ್ಡ ಕುಸಿದ ಜಾಗದಲ್ಲೆ ಮನೆ ನಿರ್ಮಿಸಲು ಕಾನೂನಿನ ಅವಕಾಶವಿಲ್ಲ. ಪರ್ಯಾಯವಾಗಿ ಪ್ರಕೃತಿ ವಿಕೋಪದಡಿ ಅವಕಾಶಗಳ ಬಗೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮಾನವೀಯತೆ ದೃಷ್ಟಿಯಿಂದ ಇನ್ನಷ್ಟು ಅನುಕೂಲತೆ ಮತ್ತು ಅನುದಾನ ಒದಗಿಸುವಂತೆ ಮತ್ತೊಮ್ಮೆ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸುವೆ ಎಂದರು.

ಉಪವಿಭಾಗಾಧಿಕಾರಿ ಹರ್ಷವರ್ಧನ, ತಾಲೂಕು ಪಂಚಾಯತ್ ಇಒ ಗುರುದತ್, ತಹಶೀಲ್ದಾರ್‌ ಪುಟ್ಟರಾಜು, ಪಿಡಿಒ ರಮೇಶ್ ನಾಯ್ಕ್, ಗ್ರಾಮ ಲೆಕ್ಕಿಗರಾದ ರೇಷ್ಮಾ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಮಮತಾ ಡಿಎಸ್ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಎ.ಕೆ.ರಹಿಮಾನ್ ಕೋಡಿಜಾಲ್, ಹಿರಿಯ ಕಾಂಗ್ರೆಸ್ ಮುಖಂಡ ಟಿ.ಎಸ್.ಅಬ್ದುಲ್ಲಾ, ಯೂಸೂಫ್ ಬಾವ, ಪಂಚಾಯತ್ ಮಾಜಿ ಅಧ್ಯಕ್ಷರಾದ ಸತ್ತಾರ್ ಸಿ.ಎಂ., ಸಿ.ಎಂ.ರವೂಫ್, ಎನ್.ಎಸ್.ಕರೀಂ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಫೀಕ್, ತಾ.ಪಂ.ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ರವಿರಾಜ್ ಶೆಟ್ಟಿ, ಸುರೇಶ್ ಭಟ್ನಗರ, ಸುದರ್ಶನ ಶೆಟ್ಟಿ ಅಂಬ್ಲಮೊಗರು, ಮಹಮ್ಮದ್ ಮೋನು, ಕಬೀರ್ ದೇರಳಕಟ್ಟೆ, ಪಂಚಾಯಿತಿ ಸದಸ್ಯ ಅಬ್ದುಲ್ ರಝಾಕ್, ಮಹಮ್ಮದ್ ಹನೀಫ್, ಇಬ್ರಾಹಿಂ ಬದ್ಯಾರ್, ಇಕ್ಬಾಲ್ ಎಚ್.ಆರ್. ಮೊದಲಾದವರು ಉಪಸ್ಥಿತರಿದ್ದರು.

ADVERTISEMENT

ಗಾಯಾಳುಗಳ ಆರೋಗ್ಯ ವಿಚಾರಿಸಿದ ಯು.ಟಿ.ಖಾದರ್: ಮಂಜನಾಡಿ ಗ್ರಾಮದ ಕೊಪ್ಪಳ ಪ್ರದೇಶದಲ್ಲಿ ಗುಡ್ಡದೊಂದಿಗೆ ಮನೆ ಕುಸಿದ ದುರಂತದಲ್ಲಿ ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿರುವ ಅಶ್ವಿನಿ ಹಾಗೂ ಕಾಂತಪ್ಪ ಪೂಜಾರಿ ಅವರ ಆರೋಗ್ಯವನ್ನು ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.