ಉಜಿರೆ: ದಶಲಕ್ಷಣ ಪರ್ವವು ಸರ್ವ ಪರ್ವಗಳ ರಾಜನಾಗಿದ್ದು, ದಶಧರ್ಮಗಳ ಪಾಲನೆಯಿಂದ ಮುನಿಯಾಗುವ ಯೋಗ, ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ವೇಣೂರು ಬಾಹುಬಲಿ ಕ್ಷೇತ್ರದ ಯಾತ್ರಿನಿವಾಸದಲ್ಲಿ ಕ್ಷಮಾವಳಿಯೊಂದಿಗೆ ದಶಲಕ್ಷಣ ಪರ್ವದ ಸಮಾರೋಪದಲ್ಲಿ ಮಂಗಲಪ್ರವಚನ ನೀಡಿದರು.
ದಶಧರ್ಮಗಳು ಮನಸ್ಸನ್ನು ಸುಂದರಗೊಳಿಸಿ ವಿವೇಕ ಪ್ರಾಪ್ತಿಗೆ ಪ್ರೇರಕವಾಗಿವೆ. ಅನುಕಂಪ ಮತ್ತು ಕರುಣೆಯೊಂದಿಗೆ ಅಹಿಂಸೆಯ ಪಾಲನೆ ಮಾಡಿದಾಗ ಕ್ಷಮಾ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಬದಕಿನ ಸವಾಲುಗಳನ್ನು ಕ್ಷಮಾಗುಣದೊಂದಿಗೆ ತಾಳ್ಮೆ ಮತ್ತು ಸಂಯಮದಿಂದ ಸುಲಭದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮೂಡುಬಿದಿರೆ ಜೈನ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಭಾತ್ ಬಲ್ನಾಡ್ ಧಾರ್ಮಿಕ ಉಪನ್ಯಾಸ ನೀಡಿದರು. ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಅಶ್ವಿನಿಪ್ರವೀಣ್ ಕುಮಾರ್ ಇಂದ್ರ ವಂದಿಸಿದರು.
ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಡಾ.ವರ್ಷಾ ಮತ್ತು ಸತ್ಯಪ್ರಸಾದ್ ವಿ.ಜೈನ್ ಸಮಾರಂಭದ ಪ್ರಾಯೋಜಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.