ADVERTISEMENT

ವೇಣೂರು: ಮಹಾಮಸ್ತಕಾಭಿಷೇಕ ಇಂದಿನಿಂದ ಪ್ರಾರಂಭ

ಯುಗಳ ಮುನಿಗಳ ವೇಣೂರು ಪುರಪ್ರವೇಶ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 5:10 IST
Last Updated 22 ಫೆಬ್ರುವರಿ 2024, 5:10 IST
ಯುಗಳ ಮುನಿಗಳು ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಯ ದರ್ಶನ ಪಡೆದರು
ಯುಗಳ ಮುನಿಗಳು ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಯ ದರ್ಶನ ಪಡೆದರು   

ಉಜಿರೆ: ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿಯ ಮಹಾಮಸ್ತಕಾಭಿಷೇಕ ಗುರುವಾರದಿಂದ (ಫೆ.22) ಆರಂಭಗೊಂಡು ಮಾ.1ರವರೆಗೆ ನಡೆಯಲಿದೆ. ಮಹಾಮಸ್ತಕಾಭಿಷೇಕಕ್ಕಾಗಿ  ಕ್ಷೇತ್ರ ಅಲಂಕೃತಗೊಂಡು ಸಜ್ಜಾಗಿ ನಿಂತಿದೆ.

ಮಸ್ತಕಾಭಿಷೇಕದ ಸಾನ್ನಿಧ್ಯ ವಹಿಸಲಿರುವ ಯುಗಳಮುನಿಗಳಾದ ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಅಮರಕೀರ್ತಿ ಮುನಿಮಹಾರಾಜರು ಬುಧವಾರ ವೇಣೂರು ಪುರಪ್ರವೇಶ ಮಾಡಿದಾಗ ಅವರನ್ನು ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಬಾಹುಬಲಿ ಕ್ಷೇತ್ರಕ್ಕೆ ಕರೆದುಕೊಂಡು ಬರಲಾಯಿತು.

ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ, ಅಭಿಷೇಕ ಸೇವೆ ವೀಕ್ಷಿಸಿದ ಮುನಿಗಳು ಬಳಿಕ ಬಾಹುಬಲಿ ಮೂರ್ತಿಯ ದರ್ಶನ ಪಡೆದರು. ಅಟ್ಟಳಿಗೆಯನ್ನು ಹತ್ತಿ ಪ್ರಶಾಂತ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಅಳದಂಗಡಿ ಅರಮನೆಯ ಪದ್ಮಪ್ರಸಾದ ಅಜಿಲ, ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ ಕಂಬಳಿ, ಸಮಿತಿಯ ಸರ್ವ ಸದಸ್ಯರು, ಊರಿನ ಶ್ರಾವಕರು-ಶ್ರಾವಕಿಯರು ಇದ್ದರು.

ಇಂದಿನ ಕಾರ್ಯಕ್ರಮ: ಗುರುವಾರದ ಕಾರ್ಯಕ್ರಮದ ಸೇವಾಕರ್ತೃ  ಅಳದಂಗಡಿ ಅರಮನೆಯ ತಿಮ್ಮಣ್ಣರಸ  ಪದ್ಮಪ್ರಸಾದ ಅಜಿಲ, ಪುಷ್ಪಲತಾ ಮತ್ತು ಮಕ್ಕಳು ಹಾಗೂ ಶಿವಪ್ರಸಾದ ಅಜಿಲ ಮತ್ತು ಕುಟುಂಬಸ್ಥರು ಆಗಿರುತ್ತಾರೆ. ಬೆಳಿಗ್ಗೆ 10 ಗಂಟೆಯಿಂದ ಇಂದ್ರ ಪ್ರತಿಷ್ಠೆ ತೋರಣ ಮುಹೂರ್ತ, ವಿಮಾನಶುದ್ಧಿ, ನಾಂದಿಮಂಗಲ ವಿಧಾನ ಮೊದಲಾದ ಧಾರ್ಮಿಕ ವಿಧಿಗಳು ನಡೆಯಲಿವೆ.  ಅಪರಾಹ್ನ ಮೂರು ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಸ್ತಕಾಭಿಷೇಕ ಮಹೋತ್ಸವ ಉದ್ಘಾಟಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.

ಮಸ್ತಕಾಭಿಷೇಕಕ್ಕೆ ಸರ್ವಾಲಂಕೃತಗೊAಡ ವೇಣೂರು ಬಾಹುಬಲಿ ಕ್ಷೇತ್ರ

ಪರಿಸರದ ಬಗ್ಗೆ ಮೆಚ್ಚುಗೆ

ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ, ಅಭಿಷೇಕ ಸೇವೆ ವೀಕ್ಷಿಸಿದ ಮುನಿಗಳು ಬಳಿಕ ಬಾಹುಬಲಿ ಮೂರ್ತಿಯ ದರ್ಶನ ಪಡೆದರು. ಅಟ್ಟಳಿಗೆಯನ್ನು ಹತ್ತಿ ಪ್ರಶಾಂತ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.