ADVERTISEMENT

ವಿಟ್ಲ | ಕನ್ಯಾನ: ಕಾಂಗ್ರೆಸ್ ಜನಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:12 IST
Last Updated 15 ಜುಲೈ 2025, 7:12 IST
ಜನಜಾಗೃತಿ ಅಭಿಯಾನದಲ್ಲಿ ಬಿ.ರಮಾನಾಥ ರೈ ಮಾತನಾಡಿದರು
ಜನಜಾಗೃತಿ ಅಭಿಯಾನದಲ್ಲಿ ಬಿ.ರಮಾನಾಥ ರೈ ಮಾತನಾಡಿದರು   

ವಿಟ್ಲ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಕನ್ಯಾನ ವಲಯ ಕಾಂಗ್ರೆಸ್ ಸಮಿತಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಭಾಗಿತ್ವದಲ್ಲಿ ‌ಕನ್ಯಾನ ಜಂಕ್ಷನ್‌ನಲ್ಲಿ ಜನಜಾಗೃತಿ ಅಭಿಯಾನ ನಡೆಯಿತು.

ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡವರ ಏಳಿಗೆಗಾಗಿ ನಿರಂತರವಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ಪ್ರತಿಯೊಬ್ಬ ಬಡವ ಸ್ವಾಭಿಮಾನದಿಂದ ಬದುಕುವಂತಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ‌ಎಂ‌.ಎಸ್.ಮಹಮ್ಮದ್, ಚಂದ್ರಶೇಖರ್ ಭಂಡಾರಿ, ಚಂದ್ರಪ್ರಕಾಶ್ ಶೆಟ್ಟಿ, ಇಬ್ರಾಹಿಂ ನವಾಝ್, ಸಫ್ವಾನ್, ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ, ಅಬ್ದುಲ್ ರಹಿಮಾನ್, ಐಡಾ ಸುರೇಶ್, ಗಣೇಶ ಭಟ್, ಮೊಯಿದು ಕುಂಞಿ, ಸುರೇಶ್ ಭಟ್, ಕೃಷ್ಣ ನಾಯ್ಕ್, ಮೊಯಿದಿನ್, ಇಬ್ರಾಹಿಂ, ಬಿ.ಕೆ.ಹಸೈನಾರ್, ಅಬ್ದುಲ್ ಮಜೀದ್ ಭಾಗವಹಿಸಿದ್ದರು.

ADVERTISEMENT

ಇತ್ತೀಚೆಗೆ ನಿಧನರಾದ ಪಂಚಾಯಿತಿ ಮಾಜಿ ಸದಸ್ಯ ಈಶ್ವರ ನಾಯ್ಕ ಅವರ ಪತ್ನಿಗೆ ಧನಸಹಾಯ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.