ADVERTISEMENT

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

ವಾಚಾನಾಲಯಕ್ಕೆ ಅನುಮತಿ ಪಡೆದು ಆಝಾನ್: ಬಿಜೆಪಿ ವಿರೋಧ 

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 5:02 IST
Last Updated 28 ಫೆಬ್ರುವರಿ 2025, 5:02 IST
ವಿಟ್ಲ ಪಟ್ಟಣ ಪಂಚಾಯಿತಿ ಸಭೆ ನಡೆಯಿತು
ವಿಟ್ಲ ಪಟ್ಟಣ ಪಂಚಾಯಿತಿ ಸಭೆ ನಡೆಯಿತು   

ವಿಟ್ಲ: ವಿದ್ಯಾ ಸಂಸ್ಥೆ ನಿರ್ಮಾಣಕ್ಕೆ ಯೋಗ್ಯವಲ್ಲದ ಜಾಗದಲ್ಲಿ ಆಕ್ಷೇಪಗಳ ನಡುವೆ ಒಪ್ಪಿಗೆ ನೀಡುವ ಅವಶ್ಯಕತೆ ಏನು? ಪುರಸಭೆಯಲ್ಲಿ ಇಲ್ಲದ ಕಾನೂನು ಪಟ್ಟಣ ಪಂಚಾಯಿತಿಯಲ್ಲಿ ಯಾವ ಕಾರಣಕ್ಕೆ ಇದೆ? ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಕೇಳಿದರು.

ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಪ್ರಸ್ತಾಪಿಸಿದರು.

ತೆರಿಗೆ ಹಾಕಿದ ತಕ್ಷಣ ಎಲ್ಲ ಅಭಿವೃದ್ಧಿಯನ್ನು ಮಾಡಲು ಸಾಧ್ಯವೇ? ದಿನಕ್ಕೆ ಮೂರು ಖಾತೆಯೂ ಆಗದಿದ್ದರೆ 90 ದಿನದೊಳಗೆ ಬಿ ಖಾತೆ, ಇ ಖಾತೆ ಮಾಡಲು ಸಾಧ್ಯವೇ ವಾಣಿಜ್ಯ ಉದ್ದೇಶದ ಕಟ್ಟಡಗಳಿಂದ ಸರಿಯಾಗಿ ತೆರಿಗೆ ಸಂಗ್ರಹ ಕಾರ್ಯ ನಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಪಳಿಕೆಯಲ್ಲಿ ವಿದ್ಯಾಸಂಸ್ಥೆ ಕಟ್ಟಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಿರ್ಣಯ ಮಾಡಲಾಗಿದ್ದು, ಅದನ್ನು ಬರೆಯುವ ಸಂದರ್ಭ ತಿರುಚಲಾಗಿದೆ. ಆ ಜಾಗದ ಸಮೀಪದಲ್ಲಿ ಜನತಾ ಕಾಲೊನಿ, ವಿಟ್ಲ ಸ್ಮಶಾನ, ಪಟ್ಟಣ ಪಂಚಾಯಿತಿ ನಿವೇಶನವಿದೆ. ಮೂಲಭೂತ ಸೌಕರ್ಯ ಇಲ್ಲದಿದ್ದರೂ ಅನುಮತಿ ನೀಡಿರುವುದು ತಪ್ಪು ಎಂದು ಸದಸ್ಯರು ದೂರಿದರು.

ವಿಟ್ಲದ ಚರ್ಚ್ ಬಳಿ ವಾಚಾನಾಲಯಕ್ಕೆ ಅನುಮತಿ ಪಡೆದು ಅಲ್ಲಿ ಮುಸ್ಲಿಮರ ಪ್ರಾರ್ಥನೆ, ಅಝಾನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಈ ಸಂದರ್ಭ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಬಳಿಕ ಈ ಬಗ್ಗೆ ಅಲ್ಲಿಯ ಸಂಬಂಧಪಟ್ಟವರಲ್ಲಿ ವಿಚಾರಿಸಿ, ನೋಟಿಸ್ ನೀಡಲಾಗುವುದು ಎಂದು ರ್ನಿಣಯಿಸಲಾಯಿತು.

ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯರಾದ ವಿಕೆಎಂ ಅಶ್ರಫ್, ಅರುಣ್ ಎಂ.ವಿಟ್ಲ, ಹಸೈನಾರ್ ನೆಲ್ಲಿಗುಡ್ಡೆ, ಅಶೋಕ್ ಕುಮಾರ್ ಶೆಟ್ಟಿ, ಹರೀಶ್ ಸಿ.ಎಚ್., ಡೀಕಯ್ಯ, ಜಯಂತ ಸಿ.ಎಚ್., ಕೃಷ್ಣ, ವಸಂತ, ರಕ್ಷಿತಾ, ಶಾಕೀರ, ಸುನೀತ, ವಿಜಯಲಕ್ಷ್ಮೀ, ಪದ್ಮಿನಿ, ಲತಾವೇಣಿ, ನಾಮನಿರ್ದೇಶಿತ ಸದಸ್ಯ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್, ಮುಖ್ಯಾಧಿಕಾರಿ ಕರುಣಾಕರ, ಸಮುದಾಯ ಸಂಘಟನಾದಿಕಾರಿ ಶ್ರೀಶೈಲ ಸಂಕನ ಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.