ಮಂಗಳೂರು: ಉಳ್ಳಾಲ ಉಳಿಯ ಆಸುಪಾಸಿನ ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಅಸಂಖ್ಯ ಮೀನುಗಳು ಸತ್ತುಬಿದ್ದಿವೆ. ಮಾಲಿನ್ಯದಿಂದಾಗಿ ಜಲಚರಗಳು ಸತ್ತಿರುವ ಸಾಧ್ಯತೆಗಳಿವೆ ಎಂದು ನದಿ ಉಳಿಸಿ ಅಭಿಯಾನದ ಸಂಚಾಲಕ ರಿಯಾಜ್ ಮಂಗಳೂರು ಆರೋಪಿಸಿದ್ದಾರೆ.
ಉಳಿಯ ಭಾಗದ ಹಿನ್ನೀರು ಮಲಿನಗೊಂಡಿದ್ದು, ನೀರಿನ ಬಣ್ಣ ಬದಲಾಗಿದೆ. ಕೈಗಾರಿಕಾ ತ್ಯಾಜ್ಯ, ಮನೆಯ ತ್ಯಾಜ್ಯಗಳು ನೇರವಾಗಿ ನದಿಗೆ ಸೇರುತ್ತಿವೆ. ಇದರಿಂದ ನೀರು ಕಲುಷಿತಗೊಂಡಿರಬಹುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.