ADVERTISEMENT

ಕೆಯ್ಯೂರಿನಲ್ಲಿ ಕಾಡುಕೋಣಗಳ ಉಪಟಳ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:32 IST
Last Updated 10 ಜನವರಿ 2026, 7:32 IST
ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮ ವ್ಯಾಪ್ತಿಯ ಇಳಂತಾಜೆ ಭಾಗದಲ್ಲಿ ರಸ್ತೆ ಬದಿಯ ಗುಡ್ಡದಲ್ಲಿ ಹಗಲಲ್ಲೇ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು
ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮ ವ್ಯಾಪ್ತಿಯ ಇಳಂತಾಜೆ ಭಾಗದಲ್ಲಿ ರಸ್ತೆ ಬದಿಯ ಗುಡ್ಡದಲ್ಲಿ ಹಗಲಲ್ಲೇ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು   

ಪುತ್ತೂರು: ಕಾಡಾನೆಗಳ ಉಪಟಳದಿಂದ ಅಪಾರ ಪ್ರಮಾಣದ ಕೃಷಿಹಾನಿಯಾಗಿದ್ದ ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಕಾಡು ಕೋಣಗಳ ಹಾವಳಿ ಆರಂಭಗೊಂಡಿದೆ. ಕಾಡಾನೆಯ ಹಾವಳಿಯಿಂದ ಕೃಷಿಹಾನಿ-ನಷ್ಟಕ್ಕೊಳಗಾಗುತ್ತಾ ಬಂದಿದ್ದ ಇಲ್ಲಿನ ಕೃಷಿಕರು ಇದೀಗ ಕಾಡು ಕೋಣಗಳ ಉಪಟಳದಿಂದಾಗಿ ಕಂಗೆಟ್ಟಿದ್ದಾರೆ.

ಕೆಯ್ಯೂರು ಗ್ರಾಮದ ಕಣಿಯಾರು, ಪಲ್ಲತ್ತಡ್ಕ, ಇಳಂತಾಜೆ, ಕೆಂಗುಡೇಲು, ಕೆಯ್ಯೂರು, ಬಳಕ್ಕ ವ್ಯಾಪ್ತಿಯ ಕೃಷಿ ಪ್ರದೇಶಗಳಿಗೆ ಕೆಲವು ದಿನಗಳಿಂದ ಕಾಡುಕೋಣಗಳ ಹಿಂಡು ಕೃಷಿ ಹಾನಿ ಮಾಡುತ್ತಿದೆ. ಕಾಡು ಕೋಣಗಳ ಜತೆಗೆ ಕಾಡು ಹಂದಿಗಳ ಉಪಟಳವೂ ಹೆಚ್ಚಾಗುತ್ತಿದೆ. ಅಡಿಕೆ ಸಸಿ, ಬಾಳೆ ಗಿಡ, ತೆಂಗಿನ ಗಿಡ ಸೇರಿದಂತೆ ಕೆಲವು ಕೃಷಿ ಬೆಳೆಗಳನ್ನು ಕಾಡುಕೋಣಗಳು ನಾಶಪಡಿಸುತ್ತಿವೆ. ಹಗಲಲ್ಲೂ ದಾರಿ ಬದಿಯಲ್ಲಿ ಕಾಡು ಕೋಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡುಕೋಣಗಳು ಅಡಿಕೆ ತೋಟಕ್ಕೆ ದಾಳಿ ಮಾಡಿ ಅಡಿಕೆ ಸಸಿಗಳನ್ನು ನಾಶಪಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT