ADVERTISEMENT

ಬೆಳ್ತಂಗಡಿ : ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 11:03 IST
Last Updated 25 ಫೆಬ್ರುವರಿ 2020, 11:03 IST
ಬೆಳ್ತಂಗಡಿ ತಾಲೂಕಿನ ಚಾರಣ ಕೇಂದ್ರ ಗಡಾಯಿಕಲ್ಲಿನ ಮೇಲ್ತುದಿಯಲ್ಲಿ ಬೆಂಕಿ ಕಾಣಿಸಿರುವುದು
ಬೆಳ್ತಂಗಡಿ ತಾಲೂಕಿನ ಚಾರಣ ಕೇಂದ್ರ ಗಡಾಯಿಕಲ್ಲಿನ ಮೇಲ್ತುದಿಯಲ್ಲಿ ಬೆಂಕಿ ಕಾಣಿಸಿರುವುದು   

ಬೆಳ್ತಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲಿನಲ್ಲಿ ಮೇಲ್ಭಾಗದಲ್ಲಿ ಸೋಮವಾರ ಸಂಜೆಯ ವೇಳೆಗೆ ದಟ್ಟವಾದ ಬೆಂಕಿ ಕಾಣಿಸಿಕೊಂಡಿದೆ.

ತಾಲ್ಲೂಕಿನ ನಡ ಗ್ರಾಮದಲ್ಲಿರುವ ಈ ಗಡಾಯಿಕಲ್ಲು ಚಾರಣಪ್ರಿಯರ ಸ್ವರ್ಗವೆನಿಸಿಕೊಂಡಿದೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನದಡಿಯಲ್ಲಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿಗೆ ಅನುಮತಿಯಿಲ್ಲದೆ ಚಾರಣಕ್ಕೆ ಯಾರೂ ತೆರಳುವಂತಿಲ್ಲ. ಅದರೆ ಸೋಮವಾರ ಕಾಣಿಸಿಕೊಂಡ ಬೆಂಕಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಈ ಹಿಂದೆ ಜುಲಾಯಿ ತಿಂಗಳಲ್ಲಿ ಗಡಾಯಿಕಲ್ಲಿನ ಪೂರ್ವಭಾಗ ಸ್ವಲ್ಪ ಜರಿದು ಕೆಳಗೆ ಜಾರಿತ್ತು. ಇದೀಗ ಈ ಕಲ್ಲಿನ ಬೆಟ್ಟದ ಮೇಲ್ಭಾಗದಲ್ಲಿರುವ ಗಿಡ ಮರಗಳ ಸಹಿತ ಕೆಲವೊಂದು ಪ್ರಾಣಿ ಸಂತತಿಗಳೂ ಸಹ ಬೆಂಕಿಗೆ ಆಹುತಿಯಾಗುವ ಸಾಧ್ಯತೆಗಳಿವೆ ಎಂದು ಸ್ಥಲೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಗಡಾಯಿಕಲ್ಲು, ನರಸಿಂಹಗಡ ಅಥವಾ ಜಮಾಲಾಬಾದ್ ಕೋಟೆ ಮುಂತಾದ ಹೆಸರಿನಿಂದ ಕರೆಸಿಕೊಳ್ಳುವ ಇದು ಏಕಶಿಲೆಯಿಂದ ಕೂಡಿದೆ. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಬೆಂಕಿ ಆವರಿಸಿದ್ದರಿಂದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.