ADVERTISEMENT

ಕಾರ್ಯಕರ್ತರಿಂದಾಗಿ ಜಿಲ್ಲೆಯಲ್ಲಿ ಪಕ್ಷ ಬೆಳೆದಿದೆ : ಸಂಸದ ಬ್ರಿಜೇಶ್ ಚೌಟ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 4:59 IST
Last Updated 15 ಜುಲೈ 2024, 4:59 IST
ತೊಕ್ಕೊಟ್ಟು ಬಿಜೆಪಿ ಕಚೇರಿಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿದರು
ತೊಕ್ಕೊಟ್ಟು ಬಿಜೆಪಿ ಕಚೇರಿಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿದರು   

ಉಳ್ಳಾಲ: ಕಾರ್ಯಕರ್ತರಿಂದಾಗಿ ಜಿಲ್ಲೆಯಲ್ಲಿ ಪಕ್ಷ ಬೆಳೆದಿದ್ದು, ಪಕ್ಷದ ಚಟುವಟಿಕೆಯ ಕೇಂದ್ರವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಕಚೇರಿ ಕಾರ್ಯಾಚರಿಸಲಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ತೊಕ್ಕೊಟ್ಟಿನ ಆಶೀರ್ವಾದ್ ವಾಣಿಜ್ಯ ಕಟ್ಟಡದಲ್ಲಿ ಆರಂಭಗೊಂಡ ಬಿಜೆಪಿ ಮಂಗಳೂರು ಮಂಡಲದ ಕಾರ್ಯಾಲಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುತ್ವದ ಹೋರಾಟದಿಂದ ಗೆಲುವು ಅಸಾಧ್ಯ. ಕ್ರೈಸ್ತರು, ಮುಸಲ್ಮಾನರು ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳಾಗಿದ್ದಾರೆ. ಅಂಥ ಜನೋಪಯೋಗಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಮಂಗಳೂರು ಕ್ಷೇತ್ರ ಅವ್ಯವಸ್ಥೆಯ ಆಗರವಾಗಿದ್ದು, ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲ. ಆಶ್ರಯ ಮನೆಗಳನ್ನೂ ನೀಡಿಲ್ ಎಂದು ದೂರಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಯರಾಮ್ ಶೆಟ್ಟಿ ಶಾಸಕರಾಗಿದ್ದ ಸಂದರ್ಭ ಲಲಿತಾ ಸುಂದರ್ ಅವರ ಕಟ್ಟಡದಲ್ಲೇ ಕಚೇರಿ ಇತ್ತು. ಇದೀಗ ಮತ್ತೆ ಉಳ್ಳಾಲದಲ್ಲಿ ಬಿಜೆಪಿಯ ಶಾಸಕರು ಆಯ್ಕೆಯಾಗಬೇಕು ಎಂಬ ಆಶಯದೊಂದಿಗೆ ಅದೇ ಕಟ್ಟಡದಲ್ಲಿ ಕಚೇರಿ ನೀಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಕಾರ್ಯದರ್ಶಿ ದಿನೇಶ್ ಅಮ್ಟೂರ್, ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು ಮಂಡಲದ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ, ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ಮನೋಜ್ ಆಚಾರ್ಯ, ಸುಮಲತಾ ಕೊಣಾಜೆ ಭಾಗವಹಿಸಿದ್ದರು.

ಬಿಜೆಪಿ ಮಂಗಳೂರು ಮಂಡಲದ ಪ್ರದಾನ ಕಾರ್ಯದರ್ಶಿ ಸುಜಿತ್ ಮಾಡೂರು ಸ್ವಾಗತಿಸಿ, ನಿರೂಪಿಸಿದರು. ದಯಾನಂದ ತೊಕ್ಕೊಟ್ಟು ವಂದಿಸಿದರು.

ಕಟ್ಟಡದ ಮಾಲೀಕರೂ,ಬಿಜೆಪಿ ಮುಖಂಡರೂ ಆದ ಲಲಿತಾ ಸುಂದರ್ ಅವರನ್ನು ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.