ADVERTISEMENT

ತೆಂಕು ತಿಟ್ಟನ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ನಿಧನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 12:21 IST
Last Updated 24 ಅಕ್ಟೋಬರ್ 2025, 12:21 IST
<div class="paragraphs"><p>ಸುಜನಾ ಸುಳ್ಯ</p><p></p></div>

ಸುಜನಾ ಸುಳ್ಯ

   

ಸುಳ್ಯ (ದಕ್ಷಿಣ ಕನ್ನಡ): ತೆಂಕು ತಿಟ್ಟನ ಯಕ್ಷಗಾನ ಕಲಾವಿದ ಸುಳ್ಯದ ‘ರಂಗಮನೆ’ಯ ಯಜಮಾನ ಸುಜನಾ ಸುಳ್ಯ (89) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

ADVERTISEMENT

ಅವರಿಗೆ ಪುತ್ರ, ರಂಗಕರ್ಮಿ ಜೀವನರಾಂ ಸುಳ್ಯ ಮತ್ತು ಪುತ್ರಿ ಇದ್ದಾರೆ.

ಸುಳ್ಯದ ಪ್ರಸಿದ್ಧ ನಾವೂರು ಮನೆತನದಲ್ಲಿ ಜನಿಸಿದ ಸುಜನಾ ಅವರು ನಾಟಕ ನಟರಾಗಿ ವೃತ್ತಿ ಆರಂಭಿಸಿದರು. ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯಿಂದ ಯಕ್ಷಗಾನ ಕಲಾವಿದರಾಗಿ ಬಳ್ಳಂಬೆಟ್ಟು, ಧರ್ಮಸ್ಥಳ, ಇರಾ ಸೋಮನಾಥೇಶ್ವರ, ಕುದ್ರೋಳಿ, ಕೂಡ್ಲು, ಆದಿಸುಬ್ರಹ್ಮಣ್ಯ, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ 36 ವರ್ಷ ಕಲಾಸೇವೆ ಮಾಡಿದರು. ಹಾಸ್ಯ ಪಾತ್ರಗಳಲ್ಲಿ ವಿಶೇಷ ಪ್ರಸಿದ್ಧಿ ಪಡೆದಿದ್ದ ಅವರು ಎಲ್ಲಾ ರೀತಿಯ ಸ್ತ್ರೀ, ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಹಿಮ್ಮೇಳದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿದ್ದು, ತಾಳಮದ್ದಲೆ ಅರ್ಥಧಾರಿಯಾಗಿ, ಪ್ರಸಾಧನ ತಜ್ಞರಾಗಿ ಯಕ್ಷಗಾನದ ಸರ್ವಾಂಗವನ್ನೂ ಬಲ್ಲ ಕಲಾವಿದರಾಗಿದ್ದರು.

ಯಕ್ಷಗಾನ ಗುರುಗಳಾಗಿ ಸುಳ್ಯದಲ್ಲಿ 'ವಿದೇಯದೇವಿ ನಾಟ್ಯಕಲಾ ಸಂಘ' ಸ್ಥಾಪಿಸಿ, ರಂಗ ಮನೆಯ 'ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ'ದ ಮೂಲಕ ಹಲವರ ಯಕ್ಷಗಾನ ಕಲಿಕೆಗೆ ಪ್ರೇರಕ ಶಕ್ತಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.