ADVERTISEMENT

ಮರೋಡಿ: ಯಕ್ಷಗಾನಕ್ಕೆ ಶುಭಾಶಯ ಕೋರುವ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 15:34 IST
Last Updated 3 ಡಿಸೆಂಬರ್ 2022, 15:34 IST
ಮರೋಡಿಯಲ್ಲಿ ಯಕ್ಷಗಾನ ಬಯಲಾಟದ ಬ್ಯಾನರ್ ಹರಿದಿರುವುದು
ಮರೋಡಿಯಲ್ಲಿ ಯಕ್ಷಗಾನ ಬಯಲಾಟದ ಬ್ಯಾನರ್ ಹರಿದಿರುವುದು   

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದಲ್ಲಿ ‘ಶ್ರೀಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟಕ್ಕೆ ಶುಭಾಶಯ ಕೋರಲು ಹಾಕಲಾಗಿದ್ದ ಫೆಕ್ಸ್‌ಗಳನ್ನು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಹರಿದುಹಾಕಿ ವಿಕೃತಿ ಮೆರೆದಿದ್ದಾರೆ.

ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಬುಧವಾರ ನಡೆದಿದ್ದ ಯಕ್ಷಗಾನಕ್ಕೆ ಶುಭ ಕೋರಲು ಅನೇಕ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಬ್ಯಾನರ್ ಹರಿದಿದ್ದಾರೆ.

‘ಮರೋಡಿಯಲ್ಲಿ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವೂ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಆದರೆ, ಇದನ್ನು ಸಹಿಸಿದ ಕೆಲ ಕಿಡಿಗೇಡಿಗಳ ಗುಂಪು ಬ್ಯಾನರ್ ತೆರವುಗೊಳಿಸುವ ಮುನ್ನವೇ ಅದನ್ನು ಹರಿದು ಅಪಮಾನ ಮಾಡಿದ್ದಾರೆ. ಈ ವಿಕೃತಿ ಮೆರೆದವರು ತಪ್ಪೊಪ್ಪಿಕೊಳ್ಳದಿದ್ದರೆ ದೈವಗಳ ಮೊರೆ ಹೋಗುತ್ತೇವೆ’ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.