ADVERTISEMENT

ಮೂಕಾಂಬಿಕಾ ಯಕ್ಷ ತರಬೇತಿ ಕೇಂದ್ರದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:29 IST
Last Updated 13 ಡಿಸೆಂಬರ್ 2025, 4:29 IST
ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ ವಾರ್ಷಿಕೋತ್ಸವದಲ್ಲಿ ವೇಷ ಕಟ್ಟಿದ ಕೇಂದ್ರದ ಮಕ್ಕಳು
ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ ವಾರ್ಷಿಕೋತ್ಸವದಲ್ಲಿ ವೇಷ ಕಟ್ಟಿದ ಕೇಂದ್ರದ ಮಕ್ಕಳು   

ಮಂಗಳೂರು: ಮಂಗಳೂರು ಬೋಳಾರ ಮಂಗಳಾದೇವಿ ದೇವಸ್ಥಾನದ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ 12ನೇ ವಾರ್ಷಿಕೋತ್ಸವವು ದಕ್ಷಯಜ್ಞ, ಗಿರಿಜಾ ಕಲ್ಯಾಣ, ಕಾರ್ತಿಕೇಯ ಕಲ್ಯಾಣ ಯಕ್ಷಗಾನ ಪ್ರದರ್ಶನದೊಂದಿಗೆ ನಡೆಯಿತು.

ವೀರನಗರ ಪೆರ್ಲ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಕೇಶವ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.

ಯಕ್ಷಗಾನ ಕಲಾವಿದ ಶಿವಪ್ರಸಾದ್ ಪ್ರಭು ಮಂಗಳೂರಿನ ಹಳೆಬಂದರು ದಕ್ಕೆಯಲ್ಲಿ ದುರಸ್ತಿ ಸಲುವಾಗಿ ನಿಲ್ಲಿಸಿರುವ ದೋಣಿಯನ್ನು ಶುಚಿಗೊಳಿಸಲು ಕಾರ್ಮಿಕರು ಗುರುವಾರ ಹರಸಾಹಸಪಟ್ಟರು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.ಅಧ್ಯಕ್ಷತೆ ವಹಿಸಿದ್ದರು. ಚಿಕ್ಕ ಮಕ್ಕಳಿಗೆ ಯಕ್ಷಗಾನ ಕಲಿಸುವುದು ಪರಿಶ್ರಮದ ಕೆಲಸ. ಆರಾಧನಾ ಕಲೆಯಾದ ಯಕ್ಷಗಾನ ಕ್ಷೇತ್ರಕ್ಕೆ ಜಯಕರ್ ಪಂಡಿತ್ ಮತ್ತು ಅವರ ಬಳಗದವರು ಅದ್ಭುತ ಕೊಡುಗೆ ನೀಡಿದ್ದಾರೆ ಎಂದರು.

ADVERTISEMENT

ಹಿಮ್ಮೇಳ ಕಲಾವಿದ ಅನಿರುದ್ಧ್ ಅತ್ತಾವರ ಅವರಿಗೆ ದಿವಂಗತ ಚಂದ್ರಶೇಖರ ಬಲ್ಯಾಯ ಸಂಸ್ಮರಣಾ ಪ್ರಶಸ್ತಿ, ಯಕ್ಷಕಲಾ ಪ್ರಚಾರಕ ವೆಂಕಟೇಶ್ ಬೋಳಿಯಾಲ ಅವರಿಗೆ ಗೌರವ ಸನ್ಮಾನ, ಭಾಗವತರಾದ ದಯಾನಂದ ಕೋಡಿಕಲ್, ಕೇಂದ್ರದ ನಿರ್ದೇಶಕ ಯಕ್ಷನಾಟ್ಯ ಗುರು ಜಯಕರ ಪಂಡಿತ್ ಅವರನ್ನು ಸನ್ಮಾಸಲಾಯಿತು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಂಗಳೂರು ಅಳಪೆ ಪರಂಜ್ಯೋತಿ ಭಜನಾ ಮಂಡಳಿಯ ಅಧ್ಯಕ್ಷ ದಿನಕರ್ ಶೆಟ್ಟಿ, ಮಂಗಳೂರು ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್, ಜಪ್ಪಿನಮೊಗರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ಕುಮಾರ್, ಪೊಸಕೋರಲ್ ವಾಹಿನಿ ನಿರ್ದೇಶಕ ವಿದ್ಯಾಧರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷಗಾನ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಜಯಕರ ಪಂಡಿತ್ ಬಜಾಲ್, ಅಧ್ಯಕ್ಷ ಭಾನುಪ್ರಕಾಶ್, ರೋಹಿತ್ ಉಚ್ಚಿಲ್, ರೋಹಿತ್ ಉಚ್ಚಿಲ್ ದಂಪತಿ ಇದ್ದರು.

ಕಾರ್ಯದರ್ಶಿ ಸಾಂತಪ್ಪ ಯು. ಸ್ವಾಗತಿಸಿದರು. ಗುರುಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಮಲ್ಲಿಕಾ ಭಾನುಪ್ರಕಾಶ್ ನಿರೂಪಿಸಿದರು. ಅಧ್ಯಾಪಕ ಎಚ್. ಶಿವಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.