ADVERTISEMENT

ಉಜಿರೆ: ಕಳಚಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕೊಂಡಿ

ಡಾ. ಬಿ. ಯಶೋವರ್ಮರ ಪಾರ್ಥಿವ ಶರೀರಕ್ಕೆ ಅಂತಿಮ ನಮನ

​ಪ್ರಜಾವಾಣಿ ವಾರ್ತೆ
Published 25 ಮೇ 2022, 4:42 IST
Last Updated 25 ಮೇ 2022, 4:42 IST
ಅಂಬುಲೆನ್ಸ್‌ನಲ್ಲಿ ಡಾ. ಬಿ. ಯಶೋವರ್ಮ ಪಾರ್ಥಿವ ಶರೀರವನ್ನು ಕಾಲೇಜು ಆವರಣಕ್ಕೆ ತರಲಾಯಿತು (ಎಡಚಿತ್ರ). ವಿದ್ಯಾರ್ಥಿಗಳು ಪುಷ್ಪ ಹಿಡಿದು ನಿಂತಿರುವುದು
ಅಂಬುಲೆನ್ಸ್‌ನಲ್ಲಿ ಡಾ. ಬಿ. ಯಶೋವರ್ಮ ಪಾರ್ಥಿವ ಶರೀರವನ್ನು ಕಾಲೇಜು ಆವರಣಕ್ಕೆ ತರಲಾಯಿತು (ಎಡಚಿತ್ರ). ವಿದ್ಯಾರ್ಥಿಗಳು ಪುಷ್ಪ ಹಿಡಿದು ನಿಂತಿರುವುದು   

ಉಜಿರೆ: ಭಾನುವಾರ ಅಲ್ಪಕಾಲದ ಅನಾರೋಗ್ಯದಿಂದ ಸಿಂಗಾಪುರದಲ್ಲಿ ನಿಧನರಾದ ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರ ಪಾರ್ಥಿವ ಶರೀರವನ್ನು ಸಿಂಗಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ತರಲಾಯಿತು.

ಇಲ್ಲಿನ ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಅಂತಿಮ ನಮನಗಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಬೆಂಗಳೂರಿ ನಿಂದ ಅಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರವನ್ನು ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು.

ಅಲ್ಲಿಂದ ವಾಹನ ಜಾಥಾದ ಮೂಲಕ ಉಜಿರೆ ಸರ್ಕಲ್‌ಗೆ ಬಂದು, ಅಲ್ಲಿಂದ ಎಸ್.ಡಿ.ಎಂ. ಕಾಲೇಜಿಗೆ ತಂದು ಸಾರ್ವಜನಿಕರಿಗೆ ಅಂತಿಮ ನಮನ ಸಮರ್ಪಿಸಲು ಅವಕಾಶ ನೀಡಲಾಯಿತು. ಉಜಿರೆ ನೀರಚಿಲುಮೆ ಬಳಿ ಇರುವ ಡಾ. ಬಿ. ಯಶೋವರ್ಮರ ಸ್ವಗೃಹ ’ನಿನಾದ’ದ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ADVERTISEMENT

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್, ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪಸಿಂಹ ನಾಯಕ್, ಭೋಜೇ‌ಗೌಡ, ಮೂಡು ಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ, ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಮಂಗಳೂರು ವಿ.ವಿ. ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ, ಮಾಜಿ ಸಚಿವ ಪಿ.ಜಿ. ಆರ್. ಸಿಂಧ್ಯಾ, ಮೂಡ ಮಾಜಿ ಅಧ್ಯಕ್ಷ ಕೆ. ಸುರೇಶ ಬಳ್ಳಾಲ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ರಾಜೇಂದ್ರ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮೊದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.