ADVERTISEMENT

‘ಸಹಬಾಳ್ವೆಗೆ ಯೋಗ ದಿನಾಚರಣೆ ಮುನ್ನುಡಿ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 1:50 IST
Last Updated 22 ಜೂನ್ 2022, 1:50 IST
ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಯೋಗಾಭ್ಯಾಸ ಮಾಡಿದರು
ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಯೋಗಾಭ್ಯಾಸ ಮಾಡಿದರು   

ಮಂಗಳೂರು: ಪ್ರಪಂಚದಲ್ಲಿ ಶಾಂತಿ ಹಾಗೂ ಸಹಬಾಳ್ವೆಗೆ ಯೋಗ ದಿನಾಚರಣೆ ಮುನ್ನುಡಿ ಬರೆದಿದೆ. ಯೋಗ ಹಾಗೂ ಧ್ಯಾನ ಎಲ್ಲರಿಗೂ ಸ್ವಸ್ಥ ದೇಹಾರೋಗ್ಯವನ್ನು ಕೊಡಬಲ್ಲದು. ಎಲ್ಲ ವಿದ್ಯಾರ್ಥಿಗಳು ಯೋಗವನ್ನು ಪ್ರತಿನಿತ್ಯ ಮಾಡಬೇಕು ಎಂದು ಅಲೋಶಿಯಸ್ ಕಾಲೇಜಿನ ರಜಿಸ್ಟ್ರಾರ್ ಡಾ. ಆಲ್ವಿನ್ ಡೇಸಾ ಹೇಳಿದರು.

ದೇಲಂಪಾಡಿ ಯೋಗ ಪ್ರತಿಷ್ಠಾನ, ಆಯುಷ್ ಯೋಗದ ಸಹಭಾಗಿತ್ವದಲ್ಲಿ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೋಶ, ದೈಹಿಕ ಶಿಕ್ಷಣ ವಿಭಾಗ, ಎನ್‍ಸಿಸಿ, ಎನ್‌ಎಸ್‌ಎಸ್, ಯೂತ್ ರೆಡ್‌ಕ್ರಾಸ್ ಹಾಗೂ ಯೋಗ ವಿದ್ಯಾರ್ಥಿಗಳು ಜಂಟಿಯಾಗಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಯೋಗ ನಿರ್ದೇಶಕಿ ನೀತಾ ಶೆಟ್ಟಿ, ಸಾಮೂಹಿಕ ಯೋಗಾಸನ, ಧ್ಯಾನ ಮಾಡಲು ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಅವರು, ಯೋಗ ಮಾಡುವ ಎಲ್ಲರೂ ಯೋಗಿಗಳಂತೆ ಸಮಾಜಕ್ಕೆ ಮಾರ್ಗದರ್ಶನ ಮಾಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ADVERTISEMENT

ವಿದ್ಯಾರ್ಥಿ ಚಟುವಟಿಕೆ ಕೋಶದ ಡೀನ್ ಡಾ. ಈಶ್ವರ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಅರುಣ್ ಡಿಸೋಜ ವಂದಿಸಿದರು. ಮಹಿಮಾ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಲಿಯೋನ ಆಲಿಸನ್ ಡಿಸೋಜ, ರಶ್ಮಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.