ಕಡಬ (ಉಪ್ಪಿನಂಗಡಿ): ‘ನಿಫಾ’ ವೈರಸ್ ಬಾಧಿಸಿದ್ದ ರೋಗಿಯ ಆರೈಕೆ ಮಾಡಿದ್ದ ಕಡಬದ ನರ್ಸ್ ಒಬ್ಬರಿಗೆ ನಿಫಾ ವೈರಸ್ ಬಾಧಿಸಿ ಎಂಟು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿ ಇದ್ದಾರೆ.
ಕಡಬ ತಾಲ್ಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ಥಾಮಸ್ಟಿ.ಸಿ. ಎಂಬುವರ ಪುತ್ರ ಟಿಟ್ಟೋಥಾಮಸ್ (24) ಅನಾರೋಗ್ಯಕ್ಕೀಡಾಗಿರುವವರು. ಬಿಎಸ್ಸಿನರ್ಸಿಂಗ್ ಪದವೀಧರನಾಗಿರುವ ಅವರು, ಕೇರಳದ ಕ್ಯಾಲಿಕಟ್‌ನ ಇಕ್ರಾಇಂಟರ್‌ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್‌ರಿಸರ್ಚ್ಸೆಂಟರ್‌ನಲ್ಲಿ 2023ರಿಂದನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು, 2023ರ ಸೆಪ್ಟೆಂಬರ್‌ನಲ್ಲಿ ನಿಫಾವೈರಸ್ ಬಾಧಿತ ರೋಗಿಯ ಆರೈಕೆ ಮಾಡಿದ್ದಾರೆ ಎನ್ನಲಾಗಿದೆ. ಕ್ವಾರಂಟೈನ್‌ನಲ್ಲಿದ್ದಟಿಟ್ಟೋಥಾಮಸ್‌ಗೆ ಎರಡು ತಿಂಗಳ ಬಳಿಕ ವಿಪರೀತ ತಲೆನೋವು ಕಾಣಿಸಿಕೊಂಡಿದ್ದು, ಡಿಸೆಂಬರ್‌ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನಲ್ಲಿ ಸ್ಟ್ರೋಕ್ ಆಗಿರುವುದು ಗೊತ್ತಾಗಿದೆ. ಮರುದಿನವೇ ಅವರು ಕೋಮಾ ಸ್ಥಿತಿಗೆ ಹೋಗಿದ್ದರು.
ಆಸ್ಪತ್ರೆಯ ಆಡಳಿತ ಮಂಡಳಿ ವತಿಯಿಂದಲೇ ಚಿಕಿತ್ಸೆ ನೀಡಲಾಗಿದ್ದು, ಎಂಟು ತಿಂಗಳಲ್ಲಿ ಚೇತರಿಕೆ ಕಾಣಲಿಲ್ಲ. ಈ ಬಗ್ಗೆ ಕುಟುಂಬಸ್ಥರು ವಿಚಾರಿಸಿದಾಗ, ‘ಈಗಾಗಲೇ ₹ 40 ಲಕ್ಷ ವರಚ್ಚ ಭರಿಸಿದ್ದು, ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇನ್ನುಮುಂದೆ ನಿಭಾಯಿಸುವುದು ಕಷ್ಟ’ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿತ್ತು.
ಅತ್ಯುನ್ನತ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಕುಟುಂಬಸ್ಥರು ಕೇರಳ ಸರ್ಕಾರದ ಮೊರೆ ಹೋಗಿದ್ದು, ಸರ್ಕಾರ ಇನ್ನಷ್ಟೆ ಪ್ರತಿಕ್ರಿಯೆ ನೀಡಬೇಕಿದೆ.
ಟಿಟ್ಟೋ ಥಾಮಸ್ ಅವರ ತಂದೆ, ತಾಯಿ ಹಾಗೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಹೋದರ ಕೆಲಸ ಬಿಟ್ಟು ಎಂಟು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇದ್ದು ಆರೈಕೆ ಮಾಡುತ್ತಿದ್ದಾರೆ.
‘ಆರೋಗ್ಯದಲ್ಲಿ ಚೇತರಿಕೆ ಆಗಬಹುದು ಎಂದು ಕಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣದಿಂದ ಅನಿವಾರ್ಯವಾಗಿ ಸರ್ಕಾರದ ಗಮನಕ್ಕೆ ತರಬೇಕಾದ ಸ್ಥಿತಿ ಎದುರಾಗಿದೆ. ಕೇರಳ ಸರ್ಕಾರವು ಉನ್ನತ ಮಟ್ಟದ ಚಿಕಿತ್ಸೆಗೆ ನೆರವಾದರೆ ನನ್ನ ಸಹೋದರನ ಪ್ರಾಣ ಉಳಿಸಬಹುದು’ ಎಂದು ಟಿಟ್ಟೋ ಥಾಮಸ್ ಅವರ ಸಹೋದರ ಶಿಜೋ ಜಾಯ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.