
ಪ್ರಜಾವಾಣಿ ವಾರ್ತೆ
ಮಲೇಬೆನ್ನೂರು: ಸಮೀಪದ ಯಲವಟ್ಟಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಆಂಜನೇಯಸ್ವಾಮಿ ರಥೋತ್ಸವ ಭಾನುವಾರ ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗಿತ್ತು. ಬಲಿದಾನ, ತೆಂಗಿನ ಕಾಯಿ ಸಮರ್ಪಣೆ ಮಾಡಿದ ನಂತರ ರಾಮರಾಮ ಗೋವಿಂದ ಎನ್ನುತ್ತಾ ತೇರನ್ನು ಎಳೆದರು.
ಉಪಸ್ಥಿತ ಜನತೆ ಬಾಳೆಹಣ್ಣು, ಮಂಡಕ್ಕಿ, ಉತ್ತತ್ತಿ ರಥಕ್ಕೆ ತೂರಿ ಭಕ್ತಿ ಮೆರೆದರು. ಗ್ರಾಮದ ಉತ್ಸವ ಮೂರ್ತಿ ಉಪಸ್ಥಿತರಿದ್ದವು. ಮಂಗಳವಾದ್ಯ, ಜಾಗಟೆ ಮೇಳ, ಶಂಖವಾದ್ಯ ಮೊಳಗಿದವು. ಡೊಳ್ಳು ಕುಣಿತ, ಭಜನಾತಂಡ, ತಮಟೆ ಮೇಳ, ಜಾಂಚ್, ನಾಸಿಕ್ ಡೋಲು ಕಳೆ ತಂದಿದ್ದವು. ದೇವಾಲಯ ಹಾಗೂ ರಥವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಗ್ರಾಮದ ಜನತೆ ಭಾಗವಹಿಸಿದ್ದರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.