ADVERTISEMENT

ಅಸೂಯೆ ಬಿಟ್ಟರೆ ಉತ್ತಮ ಜೀವನ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 5:40 IST
Last Updated 26 ಮಾರ್ಚ್ 2012, 5:40 IST

ಚನ್ನಗಿರಿ: ಅಜ್ಞಾನವನ್ನು ದಿಕ್ಕರಿಸಿ, ಸುಜ್ಞಾನವನ್ನು ಬೆಳೆಸಿದ ಧೀರ ಮಹಾಜ್ಞಾನಿ ಅಲ್ಲಮಪ್ರಭುವಾಗಿದ್ದರು. ವಿವೇಕ, ಆಚಾರ, ಅರಿವುಗಳ ಮೂಲಕ ವೈಚಾರಿಕ ಆಲೋಚನೆ, ಚಿಂತನೆ ಮಾಡದಿದ್ದರೆ, ಸಮಾಜದಲ್ಲಿ ಯಾರನ್ನೂ ನಂಬದ ಸ್ಥಿತಿಯನ್ನು ತಲುಪುತ್ತವೆ. ದ್ವೇಷ, ಅಸೂಯೆ ಬಿಟ್ಟರೆ ಉತ್ತಮ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಈಚೆಗೆ ನಡೆದ 730 ನೇ ಮಾಸಿಕ ಶಿವಾನುಭವ ಹಾಗೂ ಅಲ್ಲಮಪ್ರಭು ಅವರ ಸ್ಮರಣೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಶರಣರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರು ಎಂದು ಎನಿಸಿಕೊಂಡು ಸಮಾಜಕ್ಕೆ ಕೊಡುಗೆ  ನೀಡುವಂತರಾಗಬೇಕು ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮೋಹನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ಜಿ. ಚಿದಾನಂದ್ ಮುಂತಾದವರು ಉಪಸ್ಥಿತರಿದ್ದರು. ಎಚ್.ಬಿ. ಬಸವರಾಜಪ್ಪ ಉಪನ್ಯಾಸ ನೀಡಿದರು.

 ಪ್ರವೇಶ ಪರೀಕ್ಷೆ
ಚನ್ನಗಿರಿ: ಪಟ್ಟಣದ  ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ  ಭಾನುವಾರ ಮೊರಾರ್ಜಿ ಶಾಲೆಯ ಆರನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳು ಯಶ್ವಸಿಯಾಗಿ  ನಡೆದವು.

ತಾಲ್ಲೂಕಿನ ಸೂಳೆಕೆರೆ ಹಾಗೂ ಕಾರಿಗನೂರು ಗ್ರಾಮಗಳಲ್ಲಿ  ಮೊರಾರ್ಜಿ ವಸತಿ ಶಾಲೆಗಳಿದ್ದು, 6 ನೇ ತರಗತಿಯ 150 ವಿದ್ಯಾರ್ಥಿಗಳ ಆಯ್ಕೆಗಾಗಿ ಒಟ್ಟು 505 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 483 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 22 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಬಿಇಒ ಜಿ.ಆರ್. ತಿಪ್ಪೇಶಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.