ADVERTISEMENT

ಕಂಪ್ಯೂಟರ್ ಶಿಕ್ಷಕರ ಧರಣಿ

​ಪ್ರಜಾವಾಣಿ ವಾರ್ತೆ
Published 22 ಮೇ 2012, 8:05 IST
Last Updated 22 ಮೇ 2012, 8:05 IST

ದಾವಣಗೆರೆ: ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಶಿಕ್ಷಕರಿಗೆ ಸೂಕ್ತ ವೇತನ  ಹಾಗೂ ಇತರ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ  ಕರ್ನಾಟಕ ರಾಜ್ಯ ಶಾಲಾ-ಕಾಲೇಜುಗಳ ಕಂಪ್ಯೂಟರ್ ಶಿಕ್ಷಕರ ಸಂಘದ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮುಂದೆ ಸೋಮವಾರ ಧರಣಿ ನಡೆಯಿತು.

ಐಸಿಟಿ ಫೇಸ್ -2 ಹೆಸರಿನಲ್ಲಿ ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸಲು ಶಿಕ್ಷಕರನ್ನು ನೇಮಿಸಲಾಗಿದೆ. ಆದರೆ, ಅವರಿಗೆ ಕೇವಲ ್ಙ 3,332 ಮಾಸಿಕ ವೇತನ ನೀಡಲಾಗುತ್ತಿದೆ. ಅದನ್ನೂ ಸರಿಯಾದ ಸಮಯಕ್ಕೆ ನೀಡದೇ ಮೂರು-ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಸೇವೆಗೆ ಸೇರಿದಂದಿನಿಂದ ಇಂದಿನವರೆಗೆ ಯಾವುದೇ ಸೇವಾ ಬಡ್ತಿ ಇರುವುದಿಲ್ಲ. ಇದರಿಂದ ಶಿಕ್ಷಕರು ಅತಂತ್ರರಾಗಿದ್ದಾರೆ ಎಂದು ಧರಣಿನಿರತರು ದೂರಿದರು.

ಸರ್ಕಾರ ನೌಕರರಿಗೆ ನೀಡುವ ಎಲ್ಲ ಶಿಕ್ಷಣ ಸೌಲಭ್ಯವನ್ನು ತಮಗೆ ನೀಡಬೇಕು. ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ವೇತನ ಪಾವತಿಸಬೇಕು. ಜೀವನೋಪಾಯಕ್ಕೆ ತಕ್ಕಂತೆ ವೇತನವನ್ನು ್ಙ 10 ಸಾವಿರಕ್ಕೆ ಹೆಚ್ಚಿಸಬೇಕು. ರಜೆ, ಹೆರಿಗೆ ರಜೆ ಸೌಲಭ್ಯ ನೀಡಬೇಕು. ಶಿಕ್ಷಕರನ್ನು ಕೀಳಾಗಿ ಕಾಣಬಾರದು. ಅದಕ್ಕಾಗಿ ಈ ಶಿಕ್ಷಕರನ್ನು ಇಲಾಖಾ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.

ADVERTISEMENT

ಮಹಮದ್ ರಫಿ, ಶಿವಣ್ಣ, ಬಿ.ವಿ. ಲತಾ, ಕೆ. ನಾಗರಾಜ್ ನಾಯ್ಕ,ಕೆ.ವಿ. ಶಾಂತಾ, ಎಂ.ಬಿ. ಶುಭಾ, ಎಚ್.ಎಸ್. ಶಿವಮೂರ್ತಿ, ಟಿ. ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.