ADVERTISEMENT

ಚನ್ನಗಿರಿ: ಮಧ್ಯಾಹ್ನದ ಬಿಸಿಯೂಟಕ್ಕೆ ಇಡ್ಲಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 8:25 IST
Last Updated 2 ಮಾರ್ಚ್ 2012, 8:25 IST
ಚನ್ನಗಿರಿ: ಮಧ್ಯಾಹ್ನದ ಬಿಸಿಯೂಟಕ್ಕೆ ಇಡ್ಲಿ
ಚನ್ನಗಿರಿ: ಮಧ್ಯಾಹ್ನದ ಬಿಸಿಯೂಟಕ್ಕೆ ಇಡ್ಲಿ   

ಚನ್ನಗಿರಿ: ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಗುರುವಾರ ಮಧ್ಯಾಹ್ನ ವಿದ್ಯಾರ್ಥಿನಿಯರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅನ್ನದ ಬದಲು ಇಡ್ಲಿ, ಚಟ್ನಿ, ಸಾಂಬಾರನ್ನು ಬಿಸಿಯೂಟಕ್ಕೆ ನೀಡಿದ್ದು ಇದಕ್ಕೆ ಕಾರಣವಾಗಿತ್ತು.

ಪ್ರತಿದಿನ ಅನ್ನ, ಸಾಂಬಾರು, ಚಿತ್ರಾನ್ನ ತಿಂದು ವಿದ್ಯಾರ್ಥಿನಿಯರಲ್ಲಿ  ಬಿಸಿಯೂಟದ ಬಗ್ಗೆ ಬೇಸರ ಮೂಡಿರುತ್ತಿತ್ತು. ಅವರ ಬೇಸರವನ್ನು ನೀಗಿಸಲು ಇರುವ ಆಹಾರ ಸಾಮಗ್ರಿ ಉಪಯೋಗಿಸಿಕೊಂಡು ವಿಶೇಷವಾಗಿ ಇಡ್ಲಿ ತಯಾರಿಸಿ ಚಟ್ನಿ, ಸಾಂಬಾರು ನೀಡಿ ವಿದ್ಯಾರ್ಥಿನಿಯರ ಬೇಸರವನ್ನು ದೂರ ಮಾಡುವ ಕಾರ್ಯವನ್ನು ಈ ಪ್ರೌಢಶಾಲೆಯಲ್ಲಿ ಮಾಡಲಾಗಿದೆ.
 
ಇದರಿಂದ ಅವರಿಗೆ  ಸಂತೋಷವಾಗಿದೆ ಎಂದು ಬಿಇಒ ಜಿ.ಆರ್. ತಿಪ್ಪೇಶಪ್ಪ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಶೇಖರಪ್ಪ, ಕ್ವೇತ್ರ ಸಮಾನ್ವಯಾಧಿಕಾರಿ ಕೆ.ಟಿ. ನಿಂಗಪ್ಪ, ಮುಖ್ಯಶಿಕ್ಷಕ ಎಸ್. ಶಂಕರಪ್ಪ, ಎಂ.ಬಿ. ನಾಗರಾಜ್ ಇತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.