ADVERTISEMENT

ದೇಶದ ದುಸ್ಥಿತಿಗೆ ವಿದ್ಯಾವಂತರೇ ಹೊಣೆ: ಪಾಪು

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 9:30 IST
Last Updated 24 ಜನವರಿ 2011, 9:30 IST

ದಾವಣಗೆರೆ: ದೇಶದ ಇಂದಿನ ದುಸ್ಥಿತಿಗೆ ವಿದ್ಯಾವಂತರೇ ನೇರಹೊಣೆ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಆಪಾದಿಸಿದರು.ದಾವಣಗೆರೆಯಲ್ಲಿ ಭಾನುವಾರ ನಡೆದ ಜಯದೇವ ಶ್ರೀಗಳ 54ನೇ ಸ್ಮರಣೋತ್ಸವದಲ್ಲಿ ‘ಜಯದೇವ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಅನೈತಿಕತೆ, ಅತ್ಯಾಚಾರ ಮತ್ತಿತರ ಸಮಾಜದ್ರೋಹಿ ಕೃತ್ಯಗಳಲ್ಲಿ ವಿದ್ಯಾವಂತರ ಪಾತ್ರ ಇರುವುದು ಕಳವಳಕಾರಿಯಾಗಿದೆ ಎಂದರು.ದೇಶವನ್ನು ಆಳುತ್ತಿರುವ ಸರ್ಕಾರಗಳು ಗ್ರಾಮೀಣ ಪ್ರದೇಶದ ಬಗ್ಗೆ ನಿರ್ಲಕ್ಷ್ಯ ತಾಳಿವೆ.ವಿದೇಶದ ಯೋಜನೆಗಳನ್ನು ದೇಶಕ್ಕೆ ಅನ್ವಯಿಸಲು ಹೋಗಿ ವಿಫಲವಾಗಿವೆ. ಈ ದೇಶದ ನೆಲಕ್ಕೆ ಹೊಂದುವಂತಹ ಯೋಜನೆಗಳನ್ನು ರೂಪಿಸುವ ತುರ್ತು ಅಗತ್ಯವಿದೆ. ಇಂದಿನ ಯುವಕರಲ್ಲಿ ದೇಶಾಭಿಮಾನ ಮೂಡಿಸಬೇಕಿದೆ ಎಂದು ಪ್ರತಿಪಾದಿಸಿದರು.

ಸಮಾಜವನ್ನು ತಿದ್ದುವ ಕಾರ್ಯವನ್ನು ಮಠಗಳು ಮಾಡಬೇಕು. ಪರಿವರ್ತನೆಯ ಮಾರ್ಗದಲ್ಲಿ ನಡೆಯುವಂತೆ ರಾಜಕೀಯ ನಾಯಕರನ್ನೂ ತಿದ್ದಬೇಕು ಎಂದು ಕಿವಿಮಾತು ಹೇಳಿದರು.ಸಾಹಿತಿ ಕೆ.ಎಸ್. ನಿಸಾರ್ ಆಹಮದ್, ಹೋರಾಟಗಾರ ಜಯಣ್ಣ, ಕೊಲ್ಲಾಪುರದ ಗಡಹಿಂಗ್ಲಜದ ಜಡೆಯ ಸಿದ್ಧೇಶ್ವರ ಆಶ್ರಮಕ್ಕೆ ಶೂನ್ಯಪೀಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ, ಕಾನೂನು ತಜ್ಞ ಪ್ರೊ.ಎಸ್.ಎಚ್. ಪಟೇಲ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.