ADVERTISEMENT

ನಲ್ಲೂರು ಸಹಕಾರ ಸಂಘಕ್ಕೆ ನೂರರ ಸಂಭ್ರಮ

ಎಚ್.ವಿ.ನಟರಾಜ್
Published 4 ಸೆಪ್ಟೆಂಬರ್ 2011, 10:15 IST
Last Updated 4 ಸೆಪ್ಟೆಂಬರ್ 2011, 10:15 IST

ಇಂದಿನ ದಿನಗಳಲ್ಲಿ ಯಾವುದೇ ಸಂಘ ನೂರರ ಸಂಭ್ರಮ ತಲುಪುವುದು ಕಷ್ಟ. ಏಳುಬೀಳುಗಳ ನಡುವೆ ಸಹಕಾರಿ ಸಂಘವೊಂದನ್ನು ನಿಭಾಯಿಸುವುದೂ ಅಷ್ಟು ಸುಲಭವಲ್ಲ. ಇಂತಹ ಸಮಯದಲ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದು ನೂರು ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿ ಪ್ರಗತಿಯತ್ತ ದಾಪುಗಾಲಿಟ್ಟಿದೆ.

ಚನ್ನಗಿರಿ ತಾಲ್ಲೂಕು ನಲ್ಲೂರು ಗ್ರಾಮದಲ್ಲಿ 1911ರಲ್ಲಿ ಒಂದು ಹೆಂಚಿನ ಮನೆಯಲ್ಲಿ ದಿ.ಗುರುಮೂರ್ತಪ್ಪ ಅವರ ಮುಂದಾಳತ್ವದಲ್ಲಿ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿತ್ತು.

ಆರಂಭದ ದಿನಗಳಲ್ಲಿ ಈ ಸಂಘ ಕೇವಲ ್ಙ 5,000 ವಹಿವಾಟು ನಡೆಸುತ್ತಿತ್ತು. ಆದರೆ, ಇಂದು ಈ ಸಂಘ ್ಙ 15 ಕೋಟಿ ವಹಿವಾಟು ನಡೆಸುವಷ್ಟು ಬೃಹತ್ ಸಹಕಾರ ಸಂಘವಾಗಿ ಗ್ರಾಮೀಣ ಪ್ರದೇಶದ ರೈತರ ಸಂಜೀವಿನಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾ ಜನಮನ್ನಣೆ ಪಡೆದುಕೊಂಡಿದೆ.

ಪಟೇಲ್ ಕರೇಗೌಡ್ರ ಹಾಲಪ್ಪ ಅವರು ಸಂಸ್ಥಾಪಕ ಅಧ್ಯಕ್ಷರಾಗಿದ್ದ ಈ ಸಂಘಕ್ಕೆ ಪ್ರಸ್ತುತ ಜಿ.ಎ. ರುದ್ರೇಗೌಡ ಅಧ್ಯಕ್ಷರಾಗಿದ್ದಾರೆ. ಒಟ್ಟು 3,600 ಸದಸ್ಯರನ್ನು ಈ ಸಂಘ ಹೊಂದಿದೆ.

1926ರಿಂದ 1992ರ ಅವಧಿಯೊಳಗೆ ದಿ. ಗುರುಮೂರ್ತಪ್ಪ ಅವರ ಮೇಲ್ವಿಚಾರಣೆಯಲ್ಲಿ ಈ ಸಹಕಾರ ಸಂಘ ಬೃಹತ್ ಸಂಸ್ಥೆಯಾಗಿ ಬೆಳೆಯಿತು. ಪ್ರಸ್ತುತ ಈ ಸಂಘ ರೈತರಿಗಾಗಿ ಬೆಳೆಸಾಲ, ಬೀಜ, ರಸಗೊಬ್ಬರ ನೀಡುವುದರ ಜತೆಗೆ ಪಡಿತರ ವಸ್ತುಗಳನ್ನು ಕೂಡಾ ಮಾರಾಟ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೇ, ಕ್ಯಾಂಪ್ಕೊ ಜತೆಗೂಡಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾ ಅಡಿಕೆ ಖರೀದಿಸಿ ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.

ಇಂದು ಈ ಸಹಕಾರ ಸಂಘದ ಚರಾಸ್ಥಿ ್ಙ 25 ಲಕ್ಷ ಆಗಿದೆ. ಹಾಗೆಯೇ ಬೃಹತ್ ಕಟ್ಟಡವನ್ನು ಹೊಂದಿ ಹಲವಾರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ವರ್ತಕರಿಗೆ ಬಾಡಿಗೆ ನೀಡಿ ಅದರಲ್ಲೂ ಕೂಡಾ ಆದಾಯವನ್ನು ಗಳಿಸುತ್ತಿದೆ.

ಒಟ್ಟಾರೆ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಕೂಡಾ ಅವುಗಳನ್ನು ಮೆಟ್ಟಿ ನಿಂತು ಬೃಹತ್ ಸಂಸ್ಥೆಯಾಗಿ ಬೆಳೆದು ಉತ್ತಮ ಸಹಕಾರ ಸಂಘ ಎಂದು ಹೆಗ್ಗಳಿಕೆ ಪಡೆದುಕೊಂಡಿದೆ.
ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ದೊಡ್ಡ ಶತಮಾನೋತ್ಸವ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಸಂಘದ ಕಾರ್ಯ ನಿರ್ವಹಣಾಧಿಕರಿ ಆರ್. ಕೆಂಚಪ್ಪ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.