ADVERTISEMENT

ನೀರಿನ ತೊಟ್ಟಿಯಲ್ಲಿ ಹಾವಿನ ಮರಿಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 10:40 IST
Last Updated 7 ಜುಲೈ 2012, 10:40 IST
ನೀರಿನ ತೊಟ್ಟಿಯಲ್ಲಿ ಹಾವಿನ ಮರಿಗಳು ಪತ್ತೆ
ನೀರಿನ ತೊಟ್ಟಿಯಲ್ಲಿ ಹಾವಿನ ಮರಿಗಳು ಪತ್ತೆ   

ದಾವಣಗೆರೆ: ನೀರಿನ ತೊಟ್ಟಿ (ಸಂಪ್) ಯಲ್ಲಿ 12 ನಾಗರಹಾವಿನ ಮರಿಗಳು ಪತ್ತೆಯಾದ ಘಟನೆ ನಗರದ ಎಸ್‌ಎಸ್ ಲೇಔಟ್ `ಎ~ ಬ್ಲಾಕ್, 6ನೇ ಕ್ರಾಸ್‌ನ ಮನೆಯೊಂದರಲ್ಲಿ ಶುಕ್ರವಾರ ನಡೆದಿದೆ.

ಇಲ್ಲಿನ ವಿದ್ಯುತ್ ಗುತ್ತಿಗೆದಾರ ನಟರಾಜ್ ಎಂಬುವರ ಮನೆಯಲ್ಲಿ ಮರಿಗಳು ಪತ್ತೆಯಾಗಿವೆ. ಅವರ ಪತ್ನಿ ವಿಜಯಲಕ್ಷ್ಮೀ ಅವರು ತೊಟ್ಟಿಯಲ್ಲಿ ನೀರು ಪರಿಶೀಲಿಸಲು ಮುಚ್ಚಳ ತೆರೆದಾಗ ಖಾಲಿ ತೊಟ್ಟಿಯಲ್ಲಿ ಮರಿಗಳು ಪತ್ತೆಯಾಗಿವೆ. ಮರಿಗಳು ಮುಕ್ಕಾಲು ಅಡಿ ಹಾಗೂ 1 ಅಡಿ ಗಾತ್ರದಲ್ಲಿ ಇದ್ದವು. ಗಾಬರಿಗೊಂಡ ಅವರು, ಹಾವು ಹಿಡಿಯುವ ಪರಿಣತ, ಸಮಾಜ ಸೇವಕ ಪ್ರದೀಪ್ ಅವರಿಗೆ ಕರೆ ಮಾಡಿದರು.

ಸ್ಥಳಕ್ಕೆ ಆಗಮಿಸಿದ ಪ್ರದೀಪ್ ಅವರ ಪುತ್ರ, ಎಂಜಿನಿಯರಿಂಗ್ ವಿದ್ಯಾರ್ಥಿ ಪವನ್‌ಕುಮಾರ್ ಹಾವಿನಮರಿಗಳನ್ನು ಹಿಡಿದು ಡಬ್ಬಿಯೊಂದರಲ್ಲಿ ಹಾಕಿ ಕುಂದುವಾಡ ಕೆರೆ ಸಮೀಪ ಹುತ್ತಕ್ಕೆ ಬಿಟ್ಟರು. ಒಂದು ಮರಿ ಮೊದಲೇ ಮೃತಪಟ್ಟಿತ್ತು.

ತೊಟ್ಟಿಯ ಹೆಚ್ಚುವರಿ ನೀರು ಹೊರಹೋಗುವ ಪೈಪ್ ಮೂಲಕ ಈ ಮರಿಗಳು ಬಂದಿರಬಹುದು ಎಂದು ಶಂಕಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.