ADVERTISEMENT

ನೇತ್ರದಾನದ ಅರಿವು ಅಗತ್ಯ: ಸುಮಿತ್ರಾದೇವಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 9:00 IST
Last Updated 26 ಆಗಸ್ಟ್ 2011, 9:00 IST
ನೇತ್ರದಾನದ ಅರಿವು ಅಗತ್ಯ: ಸುಮಿತ್ರಾದೇವಿ
ನೇತ್ರದಾನದ ಅರಿವು ಅಗತ್ಯ: ಸುಮಿತ್ರಾದೇವಿ   

ದಾವಣಗೆರೆ: `ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಆರ್. ಸುಮಿತ್ರಾದೇವಿ ಸಲಹೆ ನೀಡಿದರು.
ನಗರದಲ್ಲಿ ಗುರುವಾರ ಲಯನ್ಸ್ ಕ್ಲಬ್, ಲಯನ್ಸ್ ಟ್ರಸ್ಟ್ ಹಾಗೂ ನಯನ ಸೂಪರ್ ಸ್ಟೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಲಯನ್ಸ್-ನಯನ~ ಕಣ್ಣಿನ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ನೇತ್ರದಾನಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.ನೇತ್ರತಜ್ಞ ಡಾ.ಎಂ.ಜಿ. ಚಂದ್ರಶೇಖರ್ ಮಾತನಾಡಿ, ನೇತ್ರದಾನ ಮಾಡುವುದರಿಂದ ಮತ್ತೊಬ್ಬರ ಬಾಳಲ್ಲಿ ಬೆಳಕು ಮೂಡುತ್ತದೆ. ಇದರಿಂದ ನೇತ್ರದಾನ ಮಾಡುವುದು ಒಳಿತು ಎಂದ ಅವರು, `ಕಣ್ಣಿನ ಬ್ಯಾಂಕ್~ ನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಲಯನ್ಸ್ ಉಪ ಜಿಲ್ಲಾ ಗೌರ‌್ನರ್ ಎಚ್.ಎನ್. ಶಿವಕುಮಾರ್ ಮಾತನಾಡಿ, ಕಣ್ಣಿನ ಬ್ಯಾಂಕ್ ಉತ್ತಮವಾಗಿ ಕಾರ್ಯ ನಿರ್ವಹಿಸಲಿ. ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ವಿಶ್ವಮಟ್ಟದಲ್ಲಿ ಅಂಧತ್ವ ನಿವಾರಣೆ ಮಾಡುವಲ್ಲಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ನಾಗನೂರು ಅಧ್ಯಕ್ಷತೆ ವಹಿಸಿದ್ದರು. ಡಾ.ಜಿ.ಪಿ. ರೇಣು ಪ್ರಸಾದ್, ಡಾ.ಬಿ.ಎಸ್. ನಾಗಪ್ರಕಾಶ್, ಡಾ.ಮಾಧವ ಆರ್. ಹೊನ್ನತ್ತಿ, ಡಾ.ವಸುದೇಂದ್ರ ಇತರರು ಇದ್ದರು. ವಾಸುದೇವ ರಾಯ್ಕರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.