ADVERTISEMENT

ನೇತ್ರದಾನ ಮಾಡಿ ಅಂಧರಿಗೆ ಬೆಳಕು ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 6:20 IST
Last Updated 13 ಫೆಬ್ರುವರಿ 2012, 6:20 IST

ಹಿರಿಯೂರು: ನೇತ್ರಗಳ ರಕ್ಷಣೆ ಜತೆಗೆ ಅಳಿವಿನ ನಂತರ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕು ನೀಡಬೇಕು ಎಂದು ಎಂ.ಎನ್. ಸೌಭಾಗ್ಯವತಿ ದೇವರು ಕರೆ ನೀಡಿದರು.

ನಗರದ ವಿಜಯ ಕ್ಲಿನಿಕ್‌ನಲ್ಲಿ ಶನಿವಾರ ಸಂಜೆ ರೆಡ್‌ಕ್ರಾಸ್ ಸಂಸ್ಥೆ, ವಿಜಯಾ ಐ ಕ್ಲಿನಿಕ್ ಮತ್ತು ಎಸ್‌ಎಲ್‌ವಿ ನರ್ಸಿಂಗ್ ಶಾಲೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಣ್ಣಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ದೃಷ್ಟಿ ಹೀನರಾಗಬೇಕಾಗುತ್ತದೆ. ಮುಖದ ಸೌಂದರ್ಯ ಉಳಿಸಿಕೊಳ್ಳಲು ಕಣ್ಣು ಪ್ರಮುಖ ಅಂಗ ಎಂದು ಅವರು ತಿಳಿಸಿದರು.

ಡಾ.ಎಚ್.ಪಿ. ಸತೀಶ್‌ಕುಮಾರ್ ಮಾತನಾಡಿ, ನೇತ್ರ ದೋಷ ಇರುವವರಿಗೆ ಪದೇಪದೇ ತಲೆ ನೋವು ಕಾಣಿಸಿಕೊಳ್ಳುತ್ತದೆ. ಕಣ್ಣಿಗೆ ಕಸಬಿದ್ದರೆ ಕೈಯಿಂದ ಉಜ್ಜುವುದು ಅಪಾಯಕಾರಿ ಎಂದು ತಿಳಿಸಿದರು.

ವೈ.ಎಸ್. ಅಶ್ವತ್ಥಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ಎಸ್. ರಾಘವೇಂದ್ರ, ಕೇಶವಮೂರ್ತಿ, ಪಿ.ಆರ್. ಸತೀಶ್‌ಬಾಬು, ಪರಮೇಶ್ವರ ಭಟ್, ಶಿವನಾಥ್ ಕೋಕಾ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.