ನ್ಯಾಮತಿ: ಸಮೀಪದ ಗುಡ್ಡೇಹಳ್ಳಿ ಗ್ರಾಮದ ಕೆಲವು ರೈತರಿಗೆ ಸೇರಿದ ಮೆಕ್ಕೆಜೋಳದ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಪೂರ್ಣವಾಗಿ ಸುಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ವಿವರ: ಗ್ರಾಮದ ಕೆಲವು ರೈತರ ಮೆಕ್ಕೆಜೋಳ ಸುಲಿಸಿದ ರಾಶಿ, ಭತ್ತದ ಬಣವೆ ಹಾಗೂ ರಾಗಿ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ರೈತರಾದ ಕೆ. ಹನುಮಂತಪ್ಪ (350 ಕ್ವಿಂಟಲ್ ಮೆಕ್ಕೆಜೋಳ), ಸುರೇಶ (60 ಕ್ವಿಂಟಲ್ ಮೆಕ್ಕೆಜೋಳ), ಜಿ.ಎನ್. ಮಂಜುನಾಥ್(100 ಕ್ವಿಂಟಲ್ ಮೆಕ್ಕೆಜೋಳ), ಬಿ. ಪೂರ್ಣೇಶ (30 ಕ್ವಿಂಟಲ್ ಮೆಕ್ಕೆಜೋಳ), ತಿಮ್ಮಪ್ಪ(ಭತ್ತದ ಬಣವೆ ), ನವುಲೆ ರುದ್ರಪ್ಪ (ರಾಗಿ ಬಣವೆ), ಮಹಾದೇವಪ್ಪ( ಮೆಕ್ಕೆಜೋಳದ ತೆನೆ ರಾಶಿ 60 ಕ್ವಿಂಟಲ್) ಸುಟ್ಟು ಹೋಗಿದೆ.
ಹೊನ್ನಾಳಿಯ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಠಾಣಾಧಿಕಾರಿ ಜಿ.ಎಚ್. ಮಹೇಶ್ವರಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಬೆಳಗುತ್ತಿ ವಲಯದ ಕೃಷಿ ಸಹಾಯಕ ಆರ್.ಟಿ. ಕರಲಿಂಗಪ್ಪನವರ್ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.