ADVERTISEMENT

ರಂಜಾನ್: ಶಾಂತಿಯುತ ಆಚರಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 9:49 IST
Last Updated 5 ಆಗಸ್ಟ್ 2013, 9:49 IST

ಹರಿಹರ: `ಶಾಂತಿ, ಸಹೋದರತ್ವ ಹಾಗೂ ಸಹಕಾರ ಎಲ್ಲ ಧರ್ಮಗಳ ಮೂಲ ಸಾರ. ಶಾಂತಿಯುತವಾಗಿ ಹಬ್ಬ ಆಚರಿಸುವುದು ನಮ್ಮ ಧರ್ಮಕ್ಕೆ ನಾವು ಕೊಡುವ ಗೌರವ' ಎಂದು ಸಿಪಿಐ ಮಂಜುನಾಥ ಹಲವಾಗಲ್ ಅಭಿಪ್ರಾಯಪಟ್ಟರು.

ನಗರ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಭಾನುವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ ಸಹಾಯ ಮಾಡುವುದು, ಯಾರಿಗೂ ತೊಂದರೆ ಕೊಡದಂತೆ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದರು.

ಸುಪ್ರೀಂಕೋರ್ಟ್ ಆದೇಶದಂತೆ ಹಬ್ಬದ ತಿಂಗಳಲ್ಲಿ ಹಾಗೂ ಜಾಗರಣೆ ಸಂದರ್ಭಗಳಲ್ಲಿ ಮೈಕ್‌ಸೆಟ್ ಬಳಸಬೇಕು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮೈಕ್‌ಸೆಟ್ ಬಳಸಬಾರದು. ಧ್ವನಿವರ್ಧಕಗಳ ಬಳಕೆ ಇತರರಿಗೆ ತೊಂದರೆ ಆಗದಂತೆ, ಕೇಳಲು ಸಾಧ್ಯ ಎನಿಸುವಷ್ಟು ಶಬ್ದ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂಜುಮನ್-ಎ-ಇಸ್ಲಾಮಿಯಾ ಅಧ್ಯಕ್ಷ ಬಿ.ಮಹಮದ್ ಫೈರೋಜ್ ಮಾತನಾಡಿ, ಇಡೀ ಕ್ಷೇತ್ರ ಒಂದು ಅವಿಭಕ್ತ ಕುಟುಂಬದಂತೆ ಜೀವನ ನಡೆಸುತ್ತಿದೆ. ಅದರಂತೆಯೇ ನಾವೆಲ್ಲರೂ ನಡೆದುಕೊಳ್ಳುತ್ತಿದ್ದೇವೆ ಎಂದರು.

ನಗರಸಭೆ ಸದಸ್ಯ ಸೈಯದ್ ಏಜಾಜ್, ಸೈಯದ್ ಜಹೀರ್ ಅಲ್ತಮಾಷ್ ಮಾತನಾಡಿದರು.
ನಗರಸಭೆ ಸದಸ್ಯರಾದ ಕೆ.ಮರಿದೇವ, ರತ್ನಮ್ಮ, ಅಲ್ತಾಫ್, ಅಂಬುಜಾ ರಾಜೊಳ್ಳಿ, ಅಂಜುಮನ್ ಸಮಿತಿ ಕಾರ್ಯದರ್ಶಿ ಅಲಿ ಅಹಮದ್, ಸದಸ್ಯ ಎಂ.ಫಾರುಕ್, ಸಮಾಜ ಸೇವಕ ಸನಾವುಲ್ಲಾ, ಸಿಕಂದರ್, ಪರಮೇಶ್ವರಪ್ಪ, ಕೃಷ್ಣ ತಲ್ಲೂರು, ರವಿಶಂಕರ್, ಪಿಎಸ್‌ಐ ಬಿ.ದೇವೇಂದ್ರಪ್ಪ, ಎಸ್. ಓಂಕಾರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.