ADVERTISEMENT

ರಸ್ತೆ ನಿರ್ಮಾಣ ಗುಣಮಟ್ಟವಿರಲಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 5:42 IST
Last Updated 3 ಡಿಸೆಂಬರ್ 2012, 5:42 IST

ಸಂತೇಬೆನ್ನೂರು: ರಸ್ತೆ ನಿರ್ಮಾಣ ಗುಣಮಟ್ಟದಿಂದ ಇರಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲಹೆ ನೀಡಿದರು
ಇಲ್ಲಿನ ಸಾಸಲು ರಸ್ತೆಯಲ್ಲಿನ ಗ್ಯಾಮನ್ ಇಂಡಿಯಾ ಕಚೇರಿ ಆವರಣದಲ್ಲಿ ಭಾನುವಾರ ದಾವಣಗೆರೆ-ಬೀರೂರು ರಸ್ತೆ ಕಾಮಗಾರಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಚನ್ನಗಿರಿ ಮುಖಾಂತರ ದಾವಣಗೆರೆ-ಬೀರೂರು ರಾಜ್ಯ ಹೆದ್ದಾರಿ ಒಟ್ಟು 105 ಕಿ.ಮೀ. ಕಾಮಗಾರಿ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಪ್ರತಿಷ್ಠಿತ ಗ್ಯಾಮನ್ ಇಂಡಿಯಾ ಕಂಪೆನಿ ಟೆಂಡರ್ ಪಡೆದುಕೊಂಡಿದೆ. ಒಟ್ಟು ್ಙ 212.21 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ. ಸಂತೇಬೆನ್ನೂರು ಗ್ರಾಮದ ಸೂಳೆಕೆರೆ-ಸಾಸಲು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ್ಙ 6.5 ಕೋಟಿ ಮಂಜೂರಾಗಿದೆ. ಶಿವಮೊಗ್ಗ ನಗರದ ಮಾದರಿಯಲ್ಲಿ 1,400 ಮೀ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ಮಧ್ಯದಿಂದ  ಎರಡೂ ಬದಿ 40 ಅಡಿ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದರು.

ದಾವಣಗೆರೆಯಿಂದ 5 ಕಿ.ಮೀ. ದೂರ ಚತುಷ್ಪಥ ರಸ್ತೆ ಹಾಗೂ ಗ್ರಾಮಗಳನ್ನು ಹೊರತುಪಡಿಸಿ 10 ಮೀ. ಅಗಲ ಆಸ್ಪಾಲ್ಟ್ ರಸ್ತೆ ನಿರ್ಮಿಸಲಾಗುವುದು. ಸಂತೇಬೆನ್ನೂರಿನಲ್ಲಿ 1,300 ಮೀ.  ಉದ್ದ, 7 ಮೀ. ಅಗಲ ಕಾಂಕ್ರೀಟ್ ರಸ್ತೆ ಮಾಡಲಾಗುವುದು. 1 ಕಿ.ಮೀ. ಗೆ ್ಙ 2ಕೋಟಿ ವೆಚ್ಚ ಮಾಡಲಾಗುತ್ತಿದೆ. ಏಷಿಯನ್ ಅಭಿವೃದ್ಧಿ ಬ್ಯಾಂಕ್ ಅನುದಾನ ನೀಡಿದೆ ಎಂದು `ಕೆ-ಶಿಪ್' ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಾವಟೆ ಮಾಹಿತಿ ನೀಡಿದರು.
ಮೊದಲ ಹಂತ ದಾವಣಗೆರೆಯಿಂದ ಚನ್ನಗಿರಿ. ಇದು ಡಿಸೆಂಬರ್ 2013ರ ವೇಳೆಗೆ ಹಾಗೂ ಚನ್ನಗಿರಿಯಿಂದ ಬೀರೂರು ಎರಡನೇ ಹಂತವನ್ನು 2014ರಲ್ಲಿ ಪೂರ್ಣಗೊಳ್ಳಲಿದೆ ಎಂದು ಗ್ಯಾಮನ್ ಇಂಡಿಯಾದ ಜನರಲ್ ಮ್ಯಾನೇಜರ್ ಮನೋಹರ್ ರೆಡ್ಡಿ ತಿಳಿಸಿದರು.

ರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ಪರಿಹಾರ ಪಡೆದ ಅಂಗಡಿ, ಮನೆ ಮಾಲೀಕರು ಎರಡು ವಾರಗಳಲ್ಲಿ ಕಟ್ಟಡ ತೆರವುಗೊಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.