ದಾವಣಗೆರೆ: ನಗರದ ಧರಾಮ ವಿಜ್ಞಾನ ಕಾಲೇಜು ಮತ್ತು ಜೆಜೆಎಂ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಈಚೆಗೆ ಪದವಿ ವಿದ್ಯಾರ್ಥಿಗಳಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿಬಿರ ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಲ್. ಭೀಮಾನಂದ ಮಾತನಾಡಿ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಮೇಜರ್ ಎನ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಸಿಸಿ ಘಟಕದ ಲೆಫ್ಟಿನೆಂಟ್ ಡಿ. ರಮೇಶ್, ಎನ್‌ಎಸ್‌ಎಸ್ ಘಟಕದ ಎಚ್. ಬಸವರಾಜಪ್ಪ, ಕ್ರೀಡಾ ವಿಭಾಗದ ಎಸ್.ಆರ್. ಕುಮಾರ್, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಕಮಲಾ ಸೊಪ್ಪಿನ್, ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ವಿ. ರೇಣುಕಾಪ್ರಸಾದ, ಗ್ರಂಥಪಾಲಕರಾದ ಆರ್.ಎನ್. ಸೊಟ್ಟಮ್ಮನವರ್ ಹಾಜರಿದ್ದರು.
ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸೇರಿದಂತೆ 50 ಮಂದಿ (25 ವಿದ್ಯಾರ್ಥಿಗಳು, 25 ವಿದ್ಯಾರ್ಥಿನಿಯರು) ರಕ್ತದಾನ ಮಾಡಿದರು. ಕಾಲೇಜಿನ ಕ್ಯಾಂಟೀನ್ ಮಾಲೀಕ ಚಂದ್ರಶೇಖರ ಭಟ್ ಅವರು ರಕ್ತದಾನಿಗಳಿಗೆ ಉಚಿತ ಉಪಾಹಾರ ವ್ಯವಸ್ಥೆ ಮಾಡಿ ಪ್ರೋತ್ಸಾಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.