ADVERTISEMENT

ಅಥಣಿ ಶಿವಯೋಗಿ ಸ್ವಾಮೀಜಿಯ 187ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:24 IST
Last Updated 1 ಜುಲೈ 2022, 2:24 IST
ದಾವಣಗೆರೆ ಶಿವಯೋಗಾಶ್ರಮದಲ್ಲಿ ಗುರುವಾರ ಅಥಣಿ ಶಿವಯೋಗಿ ಸ್ವಾಮೀಜಿ ಅವರ 187ನೇ ಜಯಂತಿ ಕಾರ್ಯಕ್ರಮ ನಡೆಯಿತು
ದಾವಣಗೆರೆ ಶಿವಯೋಗಾಶ್ರಮದಲ್ಲಿ ಗುರುವಾರ ಅಥಣಿ ಶಿವಯೋಗಿ ಸ್ವಾಮೀಜಿ ಅವರ 187ನೇ ಜಯಂತಿ ಕಾರ್ಯಕ್ರಮ ನಡೆಯಿತು   

ದಾವಣಗೆರೆ: ಅಥಣಿ ಮುರುಘೇಂದ್ರ ಶಿವಯೋಗಿಗಳು ನಾಡಿನ ಸರ್ವ ಜನರ ಶಿವಯೋಗದ ಗುರುಗಳು. ಅವರ ಬದುಕು, ಸಾಧನೆ ಎಲ್ಲರಿಗೂ ಮಾದರಿಯಾಗಿ ಪ್ರೇರಣೆಯಾಗಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಾಶ್ರಮದಲ್ಲಿ ಗುರುವಾರ ನಡೆದ ಅಥಣಿ ಶಿವಯೋಗಿ ಸ್ವಾಮೀಜಿ ಅವರ 187ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಯೋಗಿಗಳದು ದಿವ್ಯಪಥ. ಅಂದರೆ ಆಧ್ಯಾತ್ಮ ಪಥ, ಧಾರ್ಮಿಕ ಪಥ , ಯೋಗ ಪಥ, ಧ್ಯಾನ ಪಥ. ಲೋಕಕಲ್ಯಾಣಕ್ಕಾಗಿ ಅವುಗಳನ್ನು ಬಳಸಿದವರು. ನಿತ್ಯವೂ ಶಿವಯೋಗ ಸುಖ ಅನುಭವಿಸುತ್ತ, ಲೋಕಕಲ್ಯಾಣ ಕುರಿತು ಚಿಂತಿಸಿ, ಸಾಧಿಸಿದವರು ಎಂದು ನೆನಪಿಸಿಕೊಂಡರು.

ADVERTISEMENT

ಜುಲೈ 13ರಂದು ಅಥಣಿ ಶಿವಯೋಗಿಯವರ ಲಿಂಗೈಕ್ಯ ಶತಮಾನೋತ್ಸವವನ್ನು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಶಿವಯೋಗಾಶ್ರಮ ಟ್ರಸ್ಟ್ ನ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ಟಿ.ಎಂ. ವೀರೇಂದ್ರ, ಲಂಬಿ ಮುರುಗೇಶಪ್ಪ, ಬೆಳ್ಳೂಡಿ ಮಂಜುನಾಥ್, ವಿಭೂತಿ ಬಸವಾನಂದ ಶರಣರು, ವಚನಮೂರ್ತಿ ಸರ್ಫಭೂಷಣ, ಶರಣಬಸವ , ಕೀರ್ತಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.