ADVERTISEMENT

ದಾವಣಗೆರೆ: 238 ಮಂದಿಗೆ ಕೊರೊನಾ, 86 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 16:54 IST
Last Updated 8 ಅಕ್ಟೋಬರ್ 2020, 16:54 IST

ದಾವಣಗೆರೆ:ಜಿಲ್ಲೆಯಲ್ಲಿ 238 ಮಂದಿಗೆ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. 86 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 17,537ಕ್ಕೆ ಏರಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 76 ಮಂದಿಗೆ ಸೋಂಕು ತಗುಲಿದೆ. ಹರಿಹರ ತಾಲ್ಲೂಕಿನಲ್ಲಿ 53, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 28, ಚನ್ನಗಿರಿ ತಾಲ್ಲೂಕಿನಲ್ಲಿ 42, ಜಗಳೂರು ತಾಲ್ಲೂಕಿನಲ್ಲಿ 38 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 17,537 ಮಂದಿಗೆ ಕೊರೊನಾ ಬಂದಿದೆ. 15,476 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 243 ಮಂದಿ ಮೃತಪಟ್ಟಿದ್ದಾರೆ. 1818 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಮಲೇಬೆನ್ನೂರು: 6 ಮಂದಿಗೆ ಕೊರೊನಾ

ಮಲೇಬೆನ್ನೂರುಹೋಬಳಿ ವ್ಯಾಪ್ತಿಯಲ್ಲಿ ಗುರುವಾರ 6 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಡಾರನಾಯ್ಕನಹಳ್ಳಿ, ವಿನಾಯಕನಗರ, ಕುಂಬಳೂರು ಗ್ರಾಮದ ತಲಾ ಒಬ್ಬ ಪುರುಷ, ನಂದಿತಾವರೆ, ಒಬ್ಬ ಪುರುಷ, ಒಬ್ಬ ಮಹಿಳೆ, ಹಿರೆಹಾಲಿವಾಣದ ಒಬ್ಬ ಮಹಿಳೆಗೆ ಸೋಂಕು ಇರುವುದು ಖಚಿತವಾಗಿದೆ.

ಸಾಸ್ವೆಹಳ್ಳಿ: ಐವರಿಗೆ ಕೋವಿಡ್‌

ಸಾಸ್ವೆಹಳ್ಳಿಹೋಬಳಿಯ ಬೆನಕನಹಳ್ಳಿಯ ಇಬ್ಬರು, ಉಜ್ಜನಿಪುರ, ಲಿಂಗಾಪುರ, ಸಾಸ್ವೆಹಳ್ಳಿಯ ತಲಾ ಒಬ್ಬರಿಗೆ ಸೇರಿ ಐದು ಜನರಿಗೆ ಕೊರೊನಾ ಸೋಂಕು ತಗುಲಿದೆಎಂದು ಉಪತಹಶೀಲ್ದಾರ್ ಎಸ್. ಪರಮೇಶ್ ನಾಯ್ಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.