ADVERTISEMENT

244 ಮಂದಿಗೆ ಕೊರೊನಾ: 5 ಮಂದಿ ಸಾವು

61 ವೃದ್ಧರು ಸೇರಿ ಒಂದೇ ದಿನ 381 ಮಂದಿ ಗುಣಮುಖರಾಗಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 16:07 IST
Last Updated 20 ಆಗಸ್ಟ್ 2020, 16:07 IST
ಮಲೇಬೆನ್ನೂರು ಸಮೀಪದ ಕೊಕ್ಕನೂರಿನಲ್ಲಿ ಗುರುವಾರ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದರು
ಮಲೇಬೆನ್ನೂರು ಸಮೀಪದ ಕೊಕ್ಕನೂರಿನಲ್ಲಿ ಗುರುವಾರ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದರು   

ದಾವಣಗೆರೆ: ಜಿಲ್ಲೆಯಲ್ಲಿ 244 ಮಂದಿಗೆ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ. ಐವರು ಮೃತಪಟ್ಟಿದ್ದಾರೆ.

ಆನಗೋಡಿನ 51 ವರ್ಷದ ಮಹಿಳೆ ಕ್ಷಯರೋಗ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಆ.18ರಂದು ಮೃತಪಟ್ಟಿದ್ದಾರೆ. ವಿನೋಬನಗರದ 63 ವರ್ಷದ ವೃದ್ಧ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಆ.18ರಂದು ನಿಧನರಾಗಿದ್ದಾರೆ. ಎಂಸಿಸಿ ಬಿ ಬ್ಲಾಕ್‌ನ 68 ವರ್ಷದ ವೃದ್ಧ ಅಧಿಕ ರಕ್ತದೊತ್ತಡದಿಂದ ಆ.20ರಂದು ಅಸುನೀಗಿದ್ದಾರೆ. ಲೇಬರ್ ಕಾಲೊನಿಯ 60 ವರ್ಷದ ವೃದ್ಧ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಆ.19ರಂದು ನಿಧನರಾಗಿದ್ದಾರೆ. ಹೊಸಬೆಳವನೂರಿನ 75 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಈ ಐವರೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಕೊರೊನಾ ಇರುವುದು ಖಚಿತವಾಗಿದೆ.

95 ವರ್ಷದ ಇಬ್ಬರು ವೃದ್ಧೆಯರು, 91 ವರ್ಷದ ಇಬ್ಬರು ವೃದ್ಧರು ಸೇರಿ 28 ವೃದ್ಧರಿಗೆ, 28 ವೃದ್ಧೆಯರಿಗೆ ಸೋಂಕು ಇರುವುದು ದೃಢಪಟ್ಟಿದೆ. 10 ಬಾಲಕರು, 8 ಬಾಲಕಿಯರಿಗೂ ಕೊರೊನಾ ಬಂದಿದೆ. 18ರಿಂದ 59 ವರ್ಷದೊಳಗಿನ 102 ಪುರುಷರು, 68 ಮಹಿಳೆಯರಿಗೆ ಸೋಂಕು ತಗುಲಿದೆ.

ADVERTISEMENT

ದಾವಣಗೆರೆ ತಾಲ್ಲೂಕಿನಲ್ಲಿ 133 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ ದೊಡ್ಡಬಾತಿಯ 13, ಕೋಡಿಹಳ್ಳಿಯ 8, ಮೆಳ್ಳೆಕಟ್ಟೆ, ಆಲೂರಿನ ತಲಾ ಇಬ್ಬರು, ಹಳೇಬಾತಿ, ಸಲಗನಹಳ್ಳಿ, ಆನಗೋಡು, ಈಚಘಟ್ಟ, ಹೊಸಬೆಳವನೂರು, ಕಂದಗಲ್‌, ನಾಗರಕಟ್ಟೆಯ ತಲಾ ಒಬ್ಬರಿಗೆ ಸೋಂಕು ಬಂದಿದೆ. ಉಳಿದ 101 ಮಂದಿ ದಾವಣಗೆರೆ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ.

ಚನ್ನಗಿರಿ ತಾಲ್ಲೂಕಿನಲ್ಲಿ 39, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 32, ಹರಿಹರ ತಾಲ್ಲೂಕಿನಲ್ಲಿ 28, ಜಗಳೂರು ತಾಲ್ಲೂಕಿನಲ್ಲಿ 8 ಮಂದಿಗೆ ಕೊರೊನಾ ಬಂದಿದೆ.

ಚಿಕಿತ್ಸೆಗಾಗಿ ದಾವಣಗೆರೆಗೆ ಬಂದಿರುವ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಬ್ಬರು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಒಬ್ಬರು, ಕೂಡ್ಲಿಗಿಯ ಒಬ್ಬರಿಗೆ ಸೋಂಕು ತಗುಲಿದೆ.

32 ವೃದ್ಧರು, 29 ವೃದ್ಧೆಯರು, 11 ಬಾಲಕರು, 15 ಬಾಲಕಿಯರು ಸೇರಿ 381 ಮಂದಿ ಗುರುವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 6270 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 4230 ಮಂದಿ ಗುಣಮುಖರಾಗಿದ್ದಾರೆ. 141 ಮಂದಿ ಮೃತಪಟ್ಟಿದ್ದಾರೆ. 1899 ಪ್ರಕರಣಗಳು ಸಕ್ರಿಯವಾಗಿವೆ. ಅದರಲ್ಲಿ 9 ಮಮದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.