ADVERTISEMENT

84 ಮಂದಿಗೆ ಕೊರೊನಾ: 209 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:05 IST
Last Updated 18 ಅಕ್ಟೋಬರ್ 2020, 16:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಜಿಲ್ಲೆಯಲ್ಲಿ 84 ಮಂದಿಗೆ ಕೊರೊನಾ ಸೋಂಕು ಇರುವುದು ಭಾನುವಾರ ದೃಢ‍ಪಟ್ಟಿದೆ. 209 ಮಂದಿ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 39, ಹರಿಹರ ತಾಲ್ಲೂಕಿನಲ್ಲಿ 16, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 15, ಚನ್ನಗಿರಿ ತಾಲ್ಲೂಕಿನಲ್ಲಿ 11 ಹಾಗೂ ಜಗಳೂರು ತಾಲ್ಲೂಕಿನಲ್ಲಿ 3 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 19,264 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ ತೀವ್ರ ಉಸಿರಾಟದ (ಸಾರಿ) ಸಮಸ್ಯೆ ಇದ್ದ 469 ಮತ್ತು ಶೀತಜ್ವರ (ಐಎಲ್‌ಐ) ಇದ್ದ 1,178 ಮಂದಿ ಸೇರಿದ್ದಾರೆ. ಒಟ್ಟು 17,903 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 251 ಮಂದಿ ಮೃತಪಟ್ಟಿದ್ದಾರೆ. 1,110 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಗ್ರಾಮಲೆಕ್ಕಾಧಿಕಾರಿ ಸಾವು
ಸಾಸ್ವೆಹಳ್ಳಿ:
ಗ್ರಾಮದ ವಾಸಿ ದಾಗಿನಕಟ್ಟೆಯ ಗ್ರಾಮ ಲೆಕ್ಕಾಧಿಕಾರಿ ಅಜಯ್ ಕುಮಾರ್. ಡಿ(35) ಭಾನುವಾರ ಬೆಳಗ್ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ 19 ರಿಂದ ನಿಧನರಾದರು.

ಅವರಿಗೆ ತಾಯಿ, ಶಿಕ್ಷಕಿ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಹಿಂದೂರುದ್ರಭೂಮಿಯಲ್ಲಿ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇಬ್ಬರಿಗೆ ಸೋಂಕು
ಮಲೇಬೆನ್ನೂರು:
ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ಪಟ್ಟಣ ಹಾಗೂ ಸಮೀಪದ ಬಿಳಸನೂರಿನ ಒಬ್ಬ ಯುವಕನಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.