ADVERTISEMENT

ರಾಜಕೀಯ ಅಸಮಾನತೆ ವಿರುದ್ಧ ಭಾವೈಕ್ಯತಾ ಪ್ರವಾಸ:ಎಸ್.ವಿ.ರಂಗನಾಥ್

ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:13 IST
Last Updated 28 ಜುಲೈ 2024, 15:13 IST
ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆ ಆಂಜನೇಯ ದೇವಸ್ಥಾನಕ್ಕೆ ಕುಂಚಿಟಿಗ ಸಮುದಾಯದವರು ಭೇಟಿ ನೀಡಿದ್ದ ಸಂದರ್ಭ
ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆ ಆಂಜನೇಯ ದೇವಸ್ಥಾನಕ್ಕೆ ಕುಂಚಿಟಿಗ ಸಮುದಾಯದವರು ಭೇಟಿ ನೀಡಿದ್ದ ಸಂದರ್ಭ   

ಸಾಸ್ವೆಹಳ್ಳಿ: ರಾಜಕೀಯ ಅಸಮಾನತೆಯ ವಿರುದ್ಧ ಕುಂಚಿಟಿಗ ಸಮುದಾಯದವರನ್ನು ಜಾಗೃತಿಗೊಳಿಸಲು ಹಾಗೂ ಸೌಲಭ್ಯಕ್ಕಾಗಿ ಭಾವೈಕ್ಯತಾ ಪ್ರವಾಸ  ಹಮ್ಮಿಕೊಳ್ಳಲಾಗಿದೆ ಎಂದು ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ತಿಳಿಸಿದರು.

ಕುಳಗಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗರ ಭಾವೈಕ್ಯತಾ ಪ್ರವಾಸ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 26 ಲಕ್ಷ ಕುಂಚಿಟಿಗ ಜನಸಂಖ್ಯೆ ಇದೆ. ಪ್ರಾದೇಶಿಕ, ಭಾಷಾ ವ್ಯತ್ಯಾಸ, ಸ್ಥಳೀಯ ಪ್ರಭಾವಿಗಳ ಒತ್ತಡದಿಂದಾಗಿ ಸಮುದಾಯದವರನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತಿರುವುದರಿಂದ ಸಮುದಾಯವು ರಾಜಕೀಯವಾಗಿ ಹಿಂದುಳಿದಿದೆ ಎಂದರು.

ADVERTISEMENT

ಕರ್ನಾಟಕ ರಾಜ್ಯ ಕುಂಚಿಟಿಗ ಸಮುದಾಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ನಿಲೋಗಲ್ ರಂಗನಗೌಡ ಮಾತನಾಡಿದರು.

ಭಾವೈಕ್ಯತಾ ಪ್ರವಾಸವು ಹಿರಿಯೂರಿನಿಂದ ಪ್ರಾರಂಭವಾಗಿ ಸಂತೆಬೆನ್ನೂರಿನ ಐತಿಹಾಸಿಕ ಸ್ಥಳ ಪುಷ್ಕರಣಿ, ಚನ್ನಗಿರಿ ತಾಲ್ಲೂಕಿನ ಗುಡ್ಡದಕೊಮಾರನಹಳ್ಳಿ, ಗುಡ್ಡದ ಬೆನಕನಹಳ್ಳಿ, ಕುಳಗಟ್ಟೆ, ಮಾಸಡಿ-ನರಸಗೊಂಡನಹಳ್ಳಿ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಸಭೆ ನಡಸಲಾಯಿತು. ಗೊಲ್ಲರಹಳ್ಳಿಯ ನಳಂದ ವಿದ್ಯಾಸಂಸ್ಥೆಯಲ್ಲೂ ವಿಶೇಷ ಸಭೆ ನಡೆಯಿತು. ಸುಂಕದಕಟ್ಟೆಯ ಯುವಕರು ಪ್ರವಾಸ ಬಂದಿದ್ದವರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಹುಲಿ ರಂಗನಾಥ್, ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷ ಜಯಣ್ಣ, ಪ್ರೊ.ಶಿವಣ್ಣ, ಪ್ರೊ.ಕೃಷ್ಣಪ್ಪ, ಹೊಳೆಕಾರ್ ನಂದೀಶ್ವರ್ ಪ್ರವಾಸದ ನೇತೃತ್ವ ವಹಿಸಿದ್ದರು. ಕುಂಚಿಟಿಗರ ನೌಕರರ ಸಂಘದ ಅಧ್ಯಕ್ಷ ಜಿ.ಎಸ್.ತಿಮ್ಮಪ್ಪ, ಮುಖಂಡರಾದ ಎಸ್.ಕೆ.ನರಸಿಂಹಮೂರ್ತಿ, ಮಾಸಡಿ ಗಜೇಂದ್ರಪ್ಪ, ಎಂ.ಎಲ್.ಸುರೇಶ್, ಪಿ.ಹಾಲೇಶಪ್ಪ, ಸಿ.ಬಿ.ಭೈರಪ್ಪ, ಅಗಸೆಬಾಗಿಲ ಹಾಲೇಶಪ್ಪ, ಚೀಲೂರು ಚಂದ್ರಪ್ಪ, ಎ.ಬಿ.ಬಸವರಾಜ್, ಎ.ಪಿ.ರವಿಕುಮಾರ್, ಚನ್ನೇನಹಳ್ಳಿ ಮಂಜುನಾಥ್, ರವೀಂದ್ರನಾಥ್ ದೊಡ್ಡಮನಿ, ಡಿ.ಬಿ. ಶ್ರೀನಾಥ್, ಕರಿಬಸಪ್ಪ, ಡಿ.ಬಿ.ರವೀಂದ್ರನಾಥ್, ಎಸ್.ಎಂ.ಪ್ರಸನ್ನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.