ದಾವಣಗೆರೆ: ಜಮೀನು ಕೆಲಸಗಳಿಗೆ ಮಾಡಿದ ಸಾಲವನ್ನು ತೀರಿಸಲು ಆಗದೆ ಮನನೊಂದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೊಡಚಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಕೆ.ವೈಗಿರೀಶ(36) ಆತ್ಮಹತ್ಯೆ ಮಾಡಿಕೊಂಡ ಯುವಕ. ತಮ್ಮ ತಂದೆಯ ಜೊತೆ ವಾಸವಿದ್ದು ಜಮೀನಿನ ಕೆಲಸಕ್ಕಾಗಿ ಧರ್ಮಸ್ಥಳ ಸಂಘದಲ್ಲಿ ₹ 25000 ಸ್ತ್ರೀಶಕ್ತಿ ಸಂಘದಿಂದ ₹ 30 ಸಾವಿರ ಖಾಸಗಿಯಾಗಿ ₹ 4 ಲಕ್ಷ ಸಾಲ ಮಾಡಿದ್ದು ಸಾಲ ತೀರಿಸುವ ಬಗ್ಗೆ ಮನನೊಂದು ಮದ್ಯದಲ್ಲಿ ವಿಷ ಬೆರಸಿಕೊಂಡು ಕುಡದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.