ADVERTISEMENT

ಜನರಲ್ಲಿ ಭೀತಿ ಸೃಷ್ಟಿಸಿದ ಆರೋಪ: ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:50 IST
Last Updated 29 ಜೂನ್ 2025, 15:50 IST
   

ದಾವಣಗೆರೆ: ಕೈಯಲ್ಲಿ ಕಲ್ಲು ಹಿಡಿದು ಜನರಲ್ಲಿ ಭೀತಿ ಸೃಷ್ಟಿಸಿ ಒತ್ತಾಯ ಪೂರ್ವಕವಾಗಿ ‘ದಾವಣಗೆರೆ ಬಂದ್‌’ ನಡೆಸಿದ ಆರೋಪದ ಮೇರೆಗೆ ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ವಿರುದ್ಧ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಭದ್ರಾ ಬಲದಂಡೆ ನಾಲೆ ಸೀಳಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಮತ್ತು ಜಿಲ್ಲಾ ರೈತ ಒಕ್ಕೂಟದ ವತಿಯಿಂದ ಶನಿವಾರ ‘ದಾವಣಗೆರೆ ಬಂದ್‌’ಗೆ ಕರೆನೀಡಲಾಗಿತ್ತು. ಈ ವೇಳೆ ಕೆಲವರು ಬಸ್‌ ಮತ್ತು ಆಟೊ ಚಾಲಕರು ಹಾಗೂ ವ್ಯಾಪಾರಿಗಳನ್ನು ಬೆದರಿಸಿದ್ದರು.

‘ಉದ್ದೇಶ ಪೂರ್ವಕವಾಗಿ ಭೀತಿ ಸೃಷ್ಟಿಸಿದ ಮತ್ತು ಅಪರಾಧಿಕ ಕೃತ್ಯದಲ್ಲಿ ತೊಡಗಿದ ಆರೋಪದ ಮೇರೆಗೆ ಲೋಕಿಕೆರೆ ನಾಗರಾಜ್‌ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.