ದಾವಣಗೆರೆ: ವೈದ್ಯಕೀಯ ಅರ್ಹತೆ ಹೊಂದಿಲ್ಲದವರು ಚರ್ಮ ಹಾಗೂ ಕೂದಲು ಚಿಕಿತ್ಸಾ ತಜ್ಞರ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟು ಮಾಡುವ ನಕಲಿ ತಜ್ಞರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚರ್ಮ ವೈದ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವೈದ್ಯಕೀಯ ಅರ್ಹತೆ ಇಲ್ಲದವರು ಚರ್ಮ, ಕೂದಲು ಹಾಗೂ ಸೌಂದರ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಬ್ಯೂಟಿಷಿಯನ್‌ಗಳು ಕೂಡ ಜನರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ. ಸಾರ್ವಜನಿಕರಿಗೆ ಮೋಸ ಮಾಡಿ ಅನ್ಯಾಯ ಎಸಗುತ್ತಿದ್ದಾರೆ ಎಂದು ಗಮನ ಸೆಳೆದರು.
‘ಚರ್ಮ ಮತ್ತು ಕೂದಲು ಕ್ಲಿನಿಕ್’ಗಳು ಎಲ್ಲೆಡೆ ತಲೆ ಎತ್ತಿವೆ. ಲೇಸರ್, ಮೈಕ್ರೋನೀಡ್ಲಿಂಗ್ ಯಂತ್ರಗಳಂತಹ ವೈದ್ಯಕೀಯ ಸಾಧನಗಳನ್ನು ಬಳಸಲಾಗುತ್ತಿದೆ. ಇವುಗಳಿಗೆ ಕಾನೂನಿನ ಪ್ರಕಾರ ಮಾನ್ಯತೆ ನೀಡಬಾರದು. ನಕಲಿ ತಜ್ಞರು ಮಾಡಿದ ಚಿಕಿತ್ಸೆಗಳಿಂದ ಮುಖ-ಕೂದಲು-ಚರ್ಮಗಳಿಗೆ ಹಾನಿ ಮಾಡಿಕೊಂಡ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ವೈದ್ಯರಾದ ಡಾ.ಮಂಜುನಾಥ್ ಹುಲ್ಮನಿ, ಡಾ.ಬಿ.ಕೆ. ವಿಶ್ವನಾಥ, ಡಾ.ಸೂಗರೆಡ್ಡಿ, ಡಾ.ಮಂಗಳ ಎಚ್.ಸಿ, ಡಾ.ಲಿಂಗರಾಜ, ಡಾ.ರೂಪ ಎಂ.ಸಿ, ಡಾ.ಸೌಮ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.