ADVERTISEMENT

ಮುಸ್ಲಿಂ ವಿರೋಧಿ ಹೇಳಿಕೆ; ಶಾಸಕ ಬಂಡಿಸಿದ್ದೇಗೌಡ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:25 IST
Last Updated 26 ಜೂನ್ 2025, 15:25 IST
ಹರಿಹರದ ಪ್ರಶಾಂತ ನಗರದಲ್ಲಿ ಬುಧವಾರ ಎಸ್‌ಡಿಪಿಐ ಕಾರ್ಯಕರ್ತರು ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟಿಸಿದರು 
ಹರಿಹರದ ಪ್ರಶಾಂತ ನಗರದಲ್ಲಿ ಬುಧವಾರ ಎಸ್‌ಡಿಪಿಐ ಕಾರ್ಯಕರ್ತರು ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟಿಸಿದರು    

ಹರಿಹರ: ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ನಗರದ ಪ್ರಶಾಂತ್ ನಗರದ ಎಚ್.ಮಜೀದ್ ಖಾನ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

‘ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇನೆ’ ಎಂದು ಬೆದರಿಕೆ ಹಾಕುವ ಮೂಲಕ ತನ್ನೊಳಗಿನ ಮುಸ್ಲಿಂ ದ್ವೇಷ ಹೊರ ಹಾಕಿದ್ದಾರೆ’ ಎಂದು ದೂರಿದರು.

ಅಂಜುಮನ್– ಎ– ಇಸ್ಲಾಮಿಯದ ಹರಿಹರ ಅಧ್ಯಕ್ಷ ಆರ್.ಸಿ.ಜಾವೀದ್, ಪಕ್ಷದ ಮುಖಂಡರಾದ ಫಯಾಜ್ ಅಹ್ಮದ್, ಸೈಯದ್ ಅಶ್ಫಾಖ್, ಸೈಯದ್ ರೆಹಮಾನ್ ಸಾಬ್, ಫಯಾಜ್ ಬೇಗ್, ಸಮಿ ಮುಜಾವರ್, ಅಫ್ರೋಜ್, ಗೌಸ್, ಸಲೀಂ ಸಾಬ್ ಹಾಗೂ ಇತರರಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.