ADVERTISEMENT

ಅರ್ಧ ಹೆಲ್ಮೆಟ್‌ಗೆ ದಂಡ ವಿಧಿಸದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 4:26 IST
Last Updated 6 ಆಗಸ್ಟ್ 2021, 4:26 IST
ದಾವಣಗೆರೆಯಲ್ಲಿ ಇನ್ನು ಆರು ತಿಂಗಳ ಕಾಲ ಫುಲ್‌ ಹೆಲ್ಮೆಟ್‌ ನಿಯಮ ಕಡ್ಡಾಯ ಮಾಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರಿಗೆ ಕಾಂಗ್ರೆಸ್‌ ಮನವಿ ಸಲ್ಲಿಸಿತು
ದಾವಣಗೆರೆಯಲ್ಲಿ ಇನ್ನು ಆರು ತಿಂಗಳ ಕಾಲ ಫುಲ್‌ ಹೆಲ್ಮೆಟ್‌ ನಿಯಮ ಕಡ್ಡಾಯ ಮಾಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರಿಗೆ ಕಾಂಗ್ರೆಸ್‌ ಮನವಿ ಸಲ್ಲಿಸಿತು   

ದಾವಣಗೆರೆ: ಕೊರೊನಾ ಸಂಕಷ್ಟ ಕಾಲದಲ್ಲಿ ಫುಲ್‌ ಹೆಲ್ಮೆಟ್‌ ಖರೀದಿಸುವುದು ಕಷ್ಟ. ಅದಕ್ಕಾಗಿ ಇನ್ನು ಆರು ತಿಂಗಳ ಕಾಲ ಫುಲ್‌ ಹೆಲ್ಮೆಟ್‌ ನಿಯಮ ಕಡ್ಡಾಯ ಮಾಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರಿಗೆ ಕಾಂಗ್ರೆಸ್‌ ಮನವಿ ಮಾಡಿದೆ.

ಐಎಸ್‌ಐ ಮಾರ್ಕ್‌ ಇರುವ ಹೆಲ್ಮೆಟ್‌ ಕಡ್ಡಾಯ ಕೂಡಲೇ ಮಾಡಬಾರದು. ಜತೆಗೆ ಆಟೋದಲ್ಲಿ ಮೀಟರ್‌ ಅಳವಡಿಸಲು ಕೂಡ ಆರು ತಿಂಗಳು ಸಮಯಾವಕಾಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದರು.

ಅರ್ಧ ಹೆಲ್ಮೆಟ್‌ಗೆ ಸದ್ಯ ದಂಡ ವಿಧಿಸುವುದಿಲ್ಲ. ಆದರೆ ಅರ್ಧ ಹೆಲ್ಮೆಟ್‌ ಮಾರಾಟವನ್ನು ನಿರ್ಬಂಧಿಸಲಾಗುವುದು ಎಂದು ಎಸ್‌ಪಿ ಭರವಸೆ ನೀಡಿದರು.

ADVERTISEMENT

ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌, ಸದಸ್ಯರಾದ ಗಡಿಗುಡಾಳ್‌ ಮಂಜುನಾಥ್‌, ಕೆ.ಚಮನ್‌ಸಾಬ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.