ADVERTISEMENT

ಅಕೌಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 16:02 IST
Last Updated 31 ಜುಲೈ 2020, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ:ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಅಕೌಂಟ್ ಮ್ಯಾನೇಜರ್ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನರೇಗಾ ಯೋಜನೆಯ ಅನುಷ್ಠಾನದಲ್ಲಿ ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ಪಾವತಿ, ರಾಜಧನ ಕಟಾವಣೆ ಹಾಗೂ ಪಾವತಿ, ವಾರ್ಷಿಕ ಲೆಕ್ಕಪತ್ರಗಳ ತಯಾರಿಕೆ ಮತ್ತು ನಿರ್ವಹಣೆ, ಹಣಕಾಸಿನ ವಿಷಯಕ್ಕೆ ಸಂಬಧಿಸಿದಂತೆ ವಿವಿಧ ಬ್ಯಾಂಕ್‍ಗಳ ಜೊತೆಗೆ ಸಮನ್ವಯ ಸಾಧಿಸುವುದು ಹಾಗೂ ಇನ್ನಿತರೆ ಲೆಕ್ಕಪತ್ರ ಕಾರ್ಯನಿರ್ವಹಿಸಬೇಕು. ಆಯ್ಕೆಯಾದವರು ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಬೇಕು.

ಅರ್ಜಿ ಸಲ್ಲಿಸುವವರು ಎ.ಕಾಂ, ಎಂ.ಬಿ.ಎ (ಫೈನಾನ್ಸ್) ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು ಹಾಗೂ 35 ವರ್ಷ ಮೀರಿರಬಾರದು. ಕನಿಷ್ಠ 2 ವರ್ಷಗಳ ಸಂಬಂಧಿತ ಅನುಭವ ಹೊಂದಿರಬೇಕು. ತಿಂಗಳಿಗೆ ₹30 ಸಾವಿರ ವೇತನ ಹಾಗೂ ಪ್ರಯಾಣ ಭತ್ಯೆ ಇರುತ್ತದೆ.

ADVERTISEMENT

ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನ. http://davanagere.nic.in ವೆಬ್‍ಸೈಟ್‍ನ ನೇಮಕಾತಿ ವಿಭಾಗದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ 1800-425-22-03 ಸಂರ್ಪಕಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.