ಸಂತೇಬೆನ್ನೂರು: ಸಮೀಪದ ಹಿರೇಕೋಗಲೂರು ಹೊರವಲಯದ ಮನೆಯೊಂದರ ಮುಂದೆ ಒಣಗಿಸಲು ಹರಡಿದ್ದ ಅಡಿಕೆಯನ್ನು ಬುಧವಾರ ತಡರಾತ್ರಿ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
ಶಿವಕುಮಾರ್ ಅವರಿಗೆ ಸೇರಿದ ಒಂದು ಕ್ವಿಂಟಲ್ ಅಡಿಕೆಯನ್ನು ಕಳ್ಳರು ದೋಚಿದ್ದಾರೆ. ಶಿವಕುಮಾರ್ ಅವರ ಸಹೋದರ ಮನೆಯ ಹೊರಗಡೆ ಕಾವಲು ಕಾಯಲು ಮಲಗಿದ್ದರು. ಅವರು ಗಾಢ ನಿದ್ರೆಯಲ್ಲಿದ್ದ ಸಮಯದಲ್ಲಿ ಕೃತ್ಯ ನಡೆದಿದೆ. ಕಳವಾದ ಅಡಿಕೆಯ ಮೌಲ್ಯ ₹ 55 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ.
ಗಿರಿಯಾಪುರ ಕಡೆಯಿಂದ ಮಾರುತಿ ವ್ಯಾನ್ ತೆರಳುತ್ತಿತ್ತು. ವ್ಯಾನ್‌ನಲ್ಲಿದ್ದವರು ಅಡಿಕೆಯನ್ನು ಮನೆಯ ಹೊರಗಡೆ ಹರಡಿರುವುದನ್ನು ಕಂಡು ವಾಹನ ನಿಲ್ಲಿಸಿ ಹಿಂತಿರುಗಿ ಬಂದಿದ್ದಾರೆ. ಒಬ್ಬ ಚಾಕು ಹಿಡಿದು ಮಲಗಿದ್ದ ವ್ಯಕ್ತಿ ಪಕ್ಕದಲ್ಲಿ ನಿಂತಿದ್ದ, ಉಳಿದವರು ಚೀಲಕ್ಕೆ ಅಡಿಕೆಯನ್ನು ತುಂಬಿ ವ್ಯಾನ್‌ಗೆ ಹಾಕಿಕೊಂಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಸ್ಥಳಕ್ಕೆ ಎಸ್‌ಐ ಶಿವರುದ್ರಪ್ಪ ಮೇಟಿ ಭೇಟಿ ನೀಡಿ ಪರಿಶೀಲಿಸಿದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.