ADVERTISEMENT

ನ್ಯಾಮತಿ | ಅಯ್ಯಪ್ಪಸ್ವಾಮಿ ಮೂರ್ತಿಗೆ ತಿರುವಾಭರಣ ಅಲಂಕಾರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:06 IST
Last Updated 15 ಜನವರಿ 2026, 3:06 IST
ನ್ಯಾಮತಿ ಭಗವಾನ್ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಅಯ್ಯಪ್ಪಸ್ವಾಮಿ ತಿರುವಾಭರಣ ಪೂಜೆಗಾಗಿ ಪುಣ್ಯಕ್ಷೇತ್ರ ತೀರ್ಥರಾಮೇಶ್ವರದಿಂದ ತಿರುವಾಭರಣ ಪೆಟ್ಟಿಗೆಯನ್ನು ಮಾಲಾಧಾರಿಗಳು  ಪಾದಯಾತ್ರೆ ಮೂಲಕ ಪಟ್ಟಣಕ್ಕೆ ತಂದರು. 
ನ್ಯಾಮತಿ ಭಗವಾನ್ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಅಯ್ಯಪ್ಪಸ್ವಾಮಿ ತಿರುವಾಭರಣ ಪೂಜೆಗಾಗಿ ಪುಣ್ಯಕ್ಷೇತ್ರ ತೀರ್ಥರಾಮೇಶ್ವರದಿಂದ ತಿರುವಾಭರಣ ಪೆಟ್ಟಿಗೆಯನ್ನು ಮಾಲಾಧಾರಿಗಳು  ಪಾದಯಾತ್ರೆ ಮೂಲಕ ಪಟ್ಟಣಕ್ಕೆ ತಂದರು.    

ನ್ಯಾಮತಿ: ಪಟ್ಟಣದ ಭಗವಾನ್ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ೩೪ನೇ ವರ್ಷದ ಪಡಿಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ಕಳೆದ ಆರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.


ಇದರ ಅಂಗವಾಗಿ ಬುಧವಾರ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಿಂದ ತಿರುವಾಭರಣ ಪೂಜೆ ನೆರವೇರಿಸಿ ಆಭರಣವಿರುವ ಪೆಟ್ಟಿಗೆಯನ್ನು ತಲೆಯಮೇಲೆ ಹೊತ್ತು ವಿವಿಧ ಗ್ರಾಮಗಳನ್ನು ಪಾದಯಾತ್ರೆ ಮೂಲಕ ದಾಟಿ ಪಟ್ಟಣಕ್ಕೆ ಆಗಮಿಸಿ, ಪ್ರಮುಖ ದೇವಸ್ಥಾನ, ಮಸೀದಿಗಳಿಗೆ ದರ್ಶನ ಪಡೆದು ಅಯ್ಯಪ್ಪಸ್ವಾಮಿ ಮೂರ್ತಿಗೆ ಆಭರಣ ಆಲಂಕಾರ ಮಾಡಿ, ಮಹಾಮಂಗಳಾರತಿ ಪೂಜೆ ನಡೆದ ನಂತರ ಸಾರ್ವಜನಿಕರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.


ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀಭಗವಾನ್ ಅಯ್ಯಪ್ಪಸ್ವಾಮಿ ಸೇವಾಟ್ರಸ್ಟ್ ಮತ್ತು ಭಾರತೀಯ ಅಯ್ಯಪ್ಪಸ್ವಾಮಿ ಸೇವಾ ಸಂಘ ನ್ಯಾಮತಿ-ಹೊನ್ನಾಳಿ ತಾಲ್ಲೂಕು ಇವರ ನೇತೃತ್ವದಲ್ಲಿ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.