ಮಲೇಬೆನ್ನೂರು: ಪಟ್ಟಣದ ಗ್ರಾಮ ದೇವತೆ ಏಕನಾಥೇಶ್ವರಿ(ಹೊರಗಿನಮ್ಮ) ದೇವಾಲಯದ ಆವರಣದಲ್ಲಿ ಗುರುವಾರ ‘ಹೂವಿನ ಬಾಣ ಬಿಟ್ಟು ಅಂಬು ಛೇದನ ಮಾಡಿ ಬನ್ನಿ ಮುಡಿದು ನಾಡಹಬ್ಬ ವಿಜಯದಶಮಿ' ಆಚರಿಸಿದರು.
ಗ್ರಾಮದ ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಹಟ್ಟಿ ದುರ್ಗಮ್ಮ, ಕಾಳಮ್ಮ, ಜೋಡಿ ಆಂಜನೇಯ, ಬಸವೇಶ್ವರ, ಬೀರಲಿಂಗೇಶ್ವರ ಉತ್ಸವಮೂರ್ತಿ ಪಾಲ್ಗೊಂಡಿದ್ದವು.
ಬನ್ನಿವೃಕ್ಷಕ್ಕೆ ಸಲ್ಲಿಸಿ ಪೂಜೆ ಸಲ್ಲಿಸಿದ ನಂತರ ರೈತ ಸಮೂಹ ಬೆಳೆ ಸಮರ್ಪಿಸಿದರು. ಕಿರಿಯರು ಹಿರಿಯರಿಗೆ ಬನ್ನಿಪತ್ರೆ ಕೊಟ್ಟು ಆಶೀರ್ವಾದ ಪಡೆದು ಶುಭಾಶಯ ವಿನಿಮಯ ಮಾಡಿಕೊಂಡರು.
ಬನ್ನಿಮುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿದ್ದರು.
ಗ್ರಾಮದ ಸರ್ವ ದೇವರ ರಾಜಬೀದಿ ಉತ್ಸವದೊಂದಿಗೆ ದಸರಾ ಉತ್ಸವಕ್ಕೆ ತೆರೆ ಬಿದ್ದಿತು.
ಬೀರಲಿಂಗೇಶ್ವರ ಕಾರಣಿಕ: ಪಟ್ಟಣದ ಬೀರಲಿಂಗೇಶ್ವರ ದೇವತೆ ಆವಾಹಿತ ‘ಬಂಗಾರದ ಕಳಸಕ್ಕೆ ಮುತ್ತು ಸುರಿದೀತು,ಅದಕೆ ನಾನು ಅದೀನಿ, ಪರಾಕ್’ ಎಂದು ಕಾರಣಿಕ ನುಡಿದ.
ಮರಿಬನ್ನಿ ಆರಂಭ : ಇಲ್ಲಿನ ಬೀರಲಿಂಗೇಶ್ವರ ದೇವಾಲಯದಲ್ಲಿ ‘ಮರಿಬನ್ನಿ’ ಉತ್ಸವ ಗೋಧೂಳಿ ಲಗ್ನದಲ್ಲಿ ಆರಂಭವಾಯಿತು.
ದೇವಾಲಯವನ್ನು ತಳಿರು ತೋರಣ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಗ್ರಾಮದ ಸಕಲ ದೇವತೆಗಳ ಉತ್ಸವ ಮೂರ್ತಿಗಳು ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.