ADVERTISEMENT

ಬಸವಾಪಟ್ಟಣ | ‘ಹದ ಮಳೆ; 4,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:07 IST
Last Updated 11 ಜೂನ್ 2025, 13:07 IST
ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಕೃಷಿ ಅಧಿಕಾರಿ ಎನ್ ಲತಾ ರೈತರಿಗೆ ಬಿತ್ತನೆ ಬೀಜ ವಿತರಿಸಿದರು
ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಕೃಷಿ ಅಧಿಕಾರಿ ಎನ್ ಲತಾ ರೈತರಿಗೆ ಬಿತ್ತನೆ ಬೀಜ ವಿತರಿಸಿದರು   

ಬಸವಾಪಟ್ಟಣ: ‘ಈ ಭಾಗದಲ್ಲಿ ಎರಡು ಮೂರು ದಿನಗಳಿಂದ ಬೀಳುತ್ತಿರುವ ಮಳೆ ಬಿತ್ತನೆಗೆ ಅನುಕೂಲವಾಗಿದ್ದು, ಕೃಷಿ ಕೇಂದ್ರದಲ್ಲಿ ಈಗ ವಿತರಿಸುತ್ತಿರುವ ಮೆಕ್ಕೆಜೋಳದ ಬೀಜಗಳನ್ನು ರೈತರು ಖರೀದಿಸಿ ಬಿತ್ತನೆಗೆ ತೊಡಗಬೇಕು’ ಎಂದು ಇಲ್ಲಿನ ಕೃಷಿ ಅಧಿಕಾರಿ ಎನ್‌.ಲತಾ ಹೇಳಿದರು.

ಬುಧವಾರ ರೈತರಿಗೆ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ವಿತರಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಕೆ.ಜಿ.ಗೆ ₹ 30, ಸಾಮಾನ್ಯವರ್ಗದ ರೈತರಿಗೆ ಕೆ.ಜಿ.ಗೆ ₹ 20ರಂತೆ  ರಿಯಾಯಿತಿ ದರ ಇದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಮೆಕ್ಕೆಜೋಳ, ಹೈಬ್ರೀಡ್‌ ಜೋಳ, ತೊಗರಿ, ಅವರೆ ಹೆಸರು ಸೇರಿ ಒಟ್ಟು 4,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಲಿದೆ ಎಂದು ಲತಾ ಹೇಳಿದರು.

ADVERTISEMENT

ಸಹಾಯಕ ಕೃಷಿ ತಾಂತ್ರಿಕ ವ್ಯವಸ್ಥಾಪಕ ಬಿ.ಎಲ್‌.ಅವಿನಾಶ್‌ ಮಾತನಾಡಿ, ‘ಜೂನ್‌ 15ರ ಒಳಗೆ ಮೆಕ್ಕೆಜೋಳದ ಬಿತ್ತನೆ ಆದಲ್ಲಿ ಸಸಿಗಳ ಕಾಂಡಗಳು ಬಲಿತು ಲದ್ದಿಹುಳುಗಳ ಬಾಧೆಯನ್ನು ತಪ್ಪಿಸಬಹುದು. ಆದಷ್ಟು ಬೇಗ ರೈತರು ಬಿತ್ತನೆಗೆ ತೊಡಗಬೇಕು ಎಂದರು.

ಸುತ್ತಲಿನ ಗ್ರಾಮಗಳ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.