ಬಸವಾಪಟ್ಟಣ: ಕ್ಯಾನ್ಸರ್ ಪೀಡಿತ ಕಣ್ಣಿನಿಂದ ತೀವ್ರ ಬಾಧೆಗೊಳಗಾಗಿದ್ದ ಹಸುವಿನ ಕಣ್ಣನ್ನು ಸಮೀಪದ ದಾಗಿನಕಟ್ಟೆಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಮೊಹ್ಮದ್ ಉಮರ್ ಫಾರೂಕ್ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದು ಹಾಕಿ ಹಸುವಿನ ಪ್ರಾಣ ಉಳಿಸಿದ್ದಾರೆ.
ದಾಗಿನಕಟ್ಟೆಯ ದ್ಯಾಮಣ್ಣ ಎಂಬುವರ ಹಸುವಿನ ಎಡಗಣ್ಣಿನಲ್ಲಿ ಹುಳುಗಳು ಉಂಟಾಗಿ ಹಲವು ತಿಂಗಳಿಂದ ನರಳುತ್ತಿತ್ತು. ಸೋಮವಾರ ಪಶು ಆಸ್ಪತ್ರೆಗೆ ತಂದಾಗ ಅದನ್ನು ಪರೀಕ್ಷಿಸಿದ ವೈದ್ಯ ಫಾರೂಕ್ ಅವರು ಇದು ಕ್ಯಾನ್ಸರ್ ರೋಗವೆಂದು ಗುರುತಿಸಿ, ರೋಗ ದೇಹಕ್ಕೆ ಹರಡದಂತೆ ಶಸ್ತ್ರ ಚಿಕಿತ್ಸೆ ಕಣ್ಣು ತೆಗೆದಿದ್ದಾರೆ.
ಹಸುವಿನ ಮಾಲೀಕ ದ್ಯಾಮಣ್ಣ, ‘ಇದು ಏಳು ವರ್ಷದ ಹಸುವಾಗಿದ್ದು, ಈಗ ಮೂರನೇ ಸೂಲಿನ ಗರ್ಭ ಧರಿಸಿದೆ. ಈಗಲೂ ಪ್ರತಿದಿನ 15 ಲೀಟರ್ ಹಾಲು ಕೊಡುತ್ತಿದೆ. ಡಾ.ಫಾರೂಕ್ ಅವರು ಇಂತಹ ಕ್ಯಾನ್ಸರ್ ಪೀಡಿತ ಹಸುವನ್ನು ಉಳಿಸಿ ಉಪಕರಿಸಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.