ADVERTISEMENT

ಬಿ.ಸಿ. ಉಮಾಪತಿ ಬಣಕ್ಕೆ ಜಯ

ದಾವಣಗೆರೆ ಅರ್ಬನ್ ಕೊ ಆಪರೇಟಿವ್ ಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 6:59 IST
Last Updated 21 ಫೆಬ್ರುವರಿ 2024, 6:59 IST

ದಾವಣಗೆರೆ: ದಾವಣಗೆರೆ ಅರ್ಬನ್ ಕೊ–ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಸಿ. ಉಮಾಪತಿ ಬಣ ವಿಜಯ ಸಾಧಿಸಿದೆ.

5 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, ಉಳಿದ 10 ಸ್ಥಾನಗಳಿಗೆ ಫೆ.11ರಂದು ಚುನಾವಣೆ ನಡೆದಿತ್ತು. ಮಂಗಳವಾರ ಮತ ಎಣಿಕೆ ನಡೆದಿದ್ದು, ಈ ಕೆಳಕಂಡವರು ಚುನಾಯಿತರಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎನ್‌.ಜಿ. ರುದ್ರಪ್ಪ ತಿಳಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಬಿ.ಸಿ. ಉಮಾಪತಿ (ಪಡೆದ ಮತ 3,952) ಅಂದನೂರು ಮುಪ್ಪಣ್ಣ (3,534), ದೇವರಮನಿ ಶಿವಕುಮಾರ್ (3,427), ಅಜ್ಜಂಪುರ ಶೆಟ್ರು ವಿಜಯ್‌ಕುಮಾರ್ (3,388). ಕೋಗುಂಡಿ ಬಕ್ಕೇಶಪ್ಪ (3,322), ಜಯರುದ್ರೇಶ್ ಟಿ.ಎಸ್. (3,233), ಕಂಚಿಕೇರಿ ಮಹೇಶ್ (3,039), ರುದ್ರಮುನಿಸ್ವಾಮಿ ಎಚ್‌.ಎಂ. (2,866), ಪಲ್ಲಾಗಟ್ಟಿ ಶಿವಾನಂದಪ್ಪ (2,650) ಹಾಗೂ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಸೋಗಿ ಮುರುಗೇಶ್ (1,995) ವಿಜೇತರಾಗಿದ್ದಾರೆ.

ADVERTISEMENT

ಅವಿರೋಧವಾಗಿ ಆಯ್ಕೆಯಾದವರು: ಚಂದ್ರಶೇಖರ್ ಎಂ. (ಪರಿಶಿಷ್ಟ ಪಂಗಡ ಮೀಸಲು), ವಿಕ್ರಮ್ ವಿ (ಪರಿಶಿಷ್ಟ ಜಾತಿ ಮೀಸಲು) ಸುರೇಖಾ ಎಂ.ಚಿಗಟೇರಿ (ಮಹಿಳಾ ಮೀಸಲು), ಅರ್ಚನಾ ಎ.ಆರ್. (ಮಹಿಳಾ ಮೀಸಲು) ಮಂಜುನಾಥ ಇ.ಎಂ. (ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು)

ಸಹಕಾರ ನಿಬಂಧನೆಯ ಕಾರಣ 6000 ಮತದಾರರು ಅನರ್ಹರಾಗಿದ್ದರು. ಅವರಿಗೂ ಅವಕಾಶ ಕಲ್ಪಿಸಬೇಕು ಎಂದು ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್‌ ಮತದಾನಕ್ಕೆ 6000 ಮತದಾರರಿಗೆ ಅವಕಾಶ ಕಲ್ಪಿಸಿದ್ದು, ಫೆ.11ರಂದು 10 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ವಿಚಾರಣೆಗೆ ಕಾಲವಕಾಶ ಬೇಕಾಗಿದ್ದರಿಂದ ಕೋರ್ಟ್ ಆದೇಶದ ಪ್ರಕಾರ ಮಂಗಳವಾರ ಮತ ಎಣಿಕೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.