ADVERTISEMENT

ಹರಪನಹಳ್ಳಿ ಬಳಿ ನೀಲಗುಂದದಲ್ಲಿ ಕರಡಿ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 4:59 IST
Last Updated 21 ಅಕ್ಟೋಬರ್ 2021, 4:59 IST
ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಕೆರೆ ಏರಿಯ ಮೇಲೆ ಕಾಣಿಸಿಕೊಂಡ ಕರಡಿ.
ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಕೆರೆ ಏರಿಯ ಮೇಲೆ ಕಾಣಿಸಿಕೊಂಡ ಕರಡಿ.   

ಹರಪನಹಳ್ಳಿ: ತಾಲ್ಲೂಕಿನ ನೀಲಗುಂದ ಗ್ರಾಮದ ರಾಷ್ಟ್ರೀಯ ಸ್ಮಾರಕ ಭೀಮೇಶ್ವರ ದೇವಸ್ಥಾನದ ಬಳಿ ಕರಡಿ ಪ್ರತ್ಯಕ್ಷವಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಗ್ರಾಮದಿಂದ ಮಜ್ಜಿಗೆರೆ ಗ್ರಾಮಕ್ಕೆ ತೆರಳುವ ರಸ್ತೆಯ ಪ್ರತ್ಯಕ್ಷವಾಗುವ ಕರಡಿಯು, ತಿರುವಿನಲ್ಲಿ ಓಡುತ್ತದೆ. ಬೈಕ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕುರಿಗಾಯಿ ಯುವಕರು ಕರಡಿಯನ್ನು ಹಿಂಬಾಲಿಸಿ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ.

ಆ ಮಾರ್ಗದಲ್ಲಿ ಓಡಾಡುವ ರೈತರು, ಕೂಲಿ ಕಾರ್ಮಿಕರು ಜಾಗೃತೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಮೊಬೈಲ್‌ನಲ್ಲಿ ವಿಡಿಯೊ ಸೆರೆ ಹಿಡಿದಿರುವವರು ಯಾರೆಂಬುದು ತಿಳಿದಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.