ADVERTISEMENT

ವ್ಯರ್ಥವಾಗಿ ಹರಿಯುತ್ತಿದೆ ಭದ್ರಾ ನೀರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 1:54 IST
Last Updated 5 ಏಪ್ರಿಲ್ 2021, 1:54 IST
ದಾವಣಗೆರೆಯ ಬನಶಂಕರಿ ಬಡಾವಣೆಯಲ್ಲಿ ವ್ಯರ್ಥವಾಗಿ ಹರಿಯುತ್ತಿರುವ ಭದ್ರಾ ನೀರು
ದಾವಣಗೆರೆಯ ಬನಶಂಕರಿ ಬಡಾವಣೆಯಲ್ಲಿ ವ್ಯರ್ಥವಾಗಿ ಹರಿಯುತ್ತಿರುವ ಭದ್ರಾ ನೀರು   

ದಾವಣಗೆರೆ: ಭದ್ರಾ ನಾಲೆಯ ನೀರು ನಗರದ ಬನಶಂಕರಿ ಬಡಾವಣೆಯಲ್ಲಿ ಬಳಿವ್ಯರ್ಥವಾಗಿ ಹರಿದುಹೋಗುತ್ತಿದೆ.

‘ಈ ಬಡಾವಣೆಯಲ್ಲಿ 20 ಎಕರೆಯಷ್ಟು ಜಮೀನು ಇದ್ದು, ಎಲ್ಲಾ ಜಮೀನುಗಳು ನಿವೇಶನಗಳಾಗಿವೆ. ಇದಕ್ಕೆ 10 ಎಚ್‌ಪಿ ಸಾಮರ್ಥ್ಯದ ಮೋಟರ್ ನೀರು ಸಾಕು. ಆದರೆ ಇಲ್ಲಿ 100 ಎಚ್‌ಪಿ ನೀರು ಬಿಡಲಾಗಿದೆ. ಇದರಿಂದಾಗಿ ಖಾಲಿ ನಿವೇಶನಗಳಲ್ಲಿ ನೀರು ಪೋಲಾಗುತ್ತಿದೆ’ ಎಂದು ರೈತಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನೀರೆತ್ತುವ ಪಂಪ್‌ಗೆ ವೆಲ್ಡಿಂಗ್ ಮಾಡಿಸಿದ್ದು, ಹಗಲು ವೇಳೆ ಕಾಯುತ್ತೇವೆ. ಆದರೆ ರಾತ್ರಿ ವೇಳೆ ದನಗಾಹಿಗಳು ಪಂಪ್ ಆನ್ ಮಾಡಿಕೊಂಡು ಖಾಲಿ ಜಾಗದಲ್ಲಿ ನೀರು ತುಂಬಿಸಿ ಆ ಜಾಗದಲ್ಲಿ ಹುಲ್ಲನ್ನು ಬೆಳೆಯುತ್ತಿದ್ದಾರೆ’ ಎಂದು ಅಧಿಕಾರಿಗಳು ದೂರುತ್ತಾರೆ.

ADVERTISEMENT

‘ಪೋಲಾಗುತ್ತಿರುವ ನೀರನ್ನು ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಕುಕ್ಕವಾಡ, ಬಲ್ಲೂರು, ಕನಕಗೊಂಡನಹಳ್ಳಿ ಮುಂತಾದ ಹಳ್ಳಿಗಳಿಗೆ ಹರಿಸಿದರೆ ಅನುಕೂಲವಾಗುತ್ತದೆ’ ಎಂದು ರೈತ ಮುಖಂಡ ಬಲ್ಲೂರು ರವಿಕುಮಾರ್ ಒತ್ತಾಯಿಸುತ್ತಾರೆ.

‘ಭದ್ರಾ ಕಾಲುವೆಯ ಕೆಳಗಡೆ ನಿವೇಶನಗಳು ಇದ್ದು, ಪೈಪ್‌ಗೆ ವೆಲ್ಡಿಂಗ್ ಮಾಡಿಸಿದರೂ ಅದನ್ನು ಕಿತ್ತು ಹಾಕಿದ್ದಾರೆ. ಸೋಮವಾರ ಇನ್ನೊಮ್ಮೆ ವೆಲ್ಡಿಂಗ್ ಮಾಡಿಸುತ್ತೇವೆ’ ಎನ್ನುತ್ತಾರೆ ಎಇಇ ಶ್ರೀಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.