ದಾವಣಗೆರೆ: ಕೋವಿಡ್–19 ಹಿನ್ನೆಲೆಯಲ್ಲಿ ಇಲ್ಲೊಂದು ಜೋಡಿ ವಿಭಿನ್ನವಾಗಿ ಮದುವೆಯ ಕರೆಯೋಲೆ ನೀಡಿದೆ. ಮದುವೆಯನ್ನು ಫೇಸ್‌ಬುಕ್ ಲೈವ್ ಮಾಡುತ್ತಿದ್ದು, ಮನೆಯಲ್ಲಿಯೇ ಇದ್ದು ಹಾರೈಸಿ ಎಂದು ಮನವಿ ಮಾಡಿದೆ.
‘ಕೋವಿಡ್–19 ಹಿನ್ನೆಲೆಯಲ್ಲಿ ಸರ್ಕಾರ ಕೆಲವೊಂದು ನಿಬಂಧನೆಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ಜಯನಗರದ ವಂಕದಾರಿ ಕುಟುಂಬ ಇಂತಹದ್ದೊಂದು ಪ್ರಯತ್ನ ಮಾಡುತ್ತಿದೆ. ನವೀನ್ ಮತ್ತು ರಂಜಿತಾ ಜೋಡಿ ಜೂನ್ 15ರಂದು ದಾವಣಗೆರೆಯ ಓಲ್ಡ್ ಸಿಟಿಯಲ್ಲಿನ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಬೆಳಗ್ಗೆ 9.30ಕ್ಕೆ ವಿವಾಹ ಮುಹೂರ್ತವಿದ್ದು, ಬೆಳಿಗ್ಗೆ 9ರಿಂದ 10ಗಂಟೆಯವರೆಗೆ ಮದುವೆಯ ಶಾಸ್ತ್ರ, ವಿಧಿ ವಿಧಾನ ಫೇಸ್ಬುಕ್ ಲೈವ್ ಬರಲಿದೆ’ ಎಂದು ವಧುವಿನ ಸಹೋದರ ನಂದಕಿಶೋರ್ ತಿಳಿಸಿದ್ದಾರೆ.
‘ಈ ಬಗ್ಗೆ ಲಗ್ನಪತ್ರಿಕೆಯಲ್ಲಿ ನಂದ ಕಿಶೋರ್ (Nand Kishore) ಅವರ ಪ್ರೊಫೈಲ್ ನೇಮ್ ಹಾಕಲಾಗಿದ್ದು, ಈ ಪ್ರೊಫೈಲ್ ಮೂಲಕ ರಂಜಿತಾ - ನವೀನ್ ಅವರ ಮದುವೆ ಲೈವ್ ವೀಕ್ಷಿಸಬಹುದು. ಮದುವೆಯಲ್ಲಿ ಕೇವಲ 50 ಜನರಿಗೆ ಮಾತ್ರ ಪ್ರವೇಶವಿದ್ದು, ಮದುವೆಗೆ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸ್ಯಾನಿಟೈಸರ್ ನೀಡಲಾಗುವುದು. ಅಂತರ ಕಾಯ್ದುಕೊಂಡು ಮದುವೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.